Home | ಬ್ರೀಥ್‌ಫ್ರೀಯ ಬಗ್ಗೆ | Cipla | ಮಾಧ್ಯಮ ಕೊಠಡಿ | ಸೈನ್ ಅಪ್ | ಹುಡುಕು
  Breathe Free
ಇದು ಕೆಮ್ಮು ಅಥವಾ
ಆಸ್ತಮಾ ಆಗಿದೆಯೆ?
ಚಿಕಿತ್ಸೆ ಮತ್ತು ನಿಯಂತ್ರಣ
FAQ & SUPPORT
 
Children's Triggers FAQ’s Asthma Kids Stories Children's Inhalers
 

ಮಕ್ಕಳಲ್ಲಿ ಆಸ್ತಮಾ

Important Points to Remember

ಆಸ್ತಮಾ ಪ್ರೇರಿತಗಳು ಎಂದರೇನು?

ಪ್ರೇರಿತಗಳು ಎಂದರೆ ನಿಮ್ಮ ಮಗುವನ್ನು ಆಸ್ತಮಾ ದಾಳಿಯನ್ನು ಪ್ರಾರಂಭಿಸುವುದು ಅಥವಾ ತೀಕ್ಷ್ಣಗೊಳಿಸುವುದಾಗಿದೆ. ಪ್ರೇರಿತಗಳು ಎಲ್ಲಾ ಕಡೆಗಳಲ್ಲಿಯೂ ಇವೆ. ನಿಮ್ಮ ಮನೆ, ಶಾಲೆ, ಆಟದ ಮೈದಾನವು ಪ್ರೇರಿತಗಳಿಂದ ಒಳಗೊಂಡಿರಬಹುದು.

ನಿಮ್ಮ ಮಗುವಿನ ಕೆಲವು ಸಾಮಾನ್ಯ ಆಸ್ತಮಾ ಪ್ರೇರಿತಗಳು ಇವುಗಳಾಗಿರಬಹುದು:
ಧೂಳು ಮತ್ತು ಹೊಗೆ
ಗಿಡಗಳಿಂದ ಪರಾಗ
ಶಾಲೆಯಲ್ಲಿನ ಸುಣ್ಣದ ದೂಳು
ವಾತಾವರಣದಲ್ಲಿನ ಬದಲಾವಣೆ
ತೀವ್ರ ಉದ್ವೇಗಳಾದ ನಗುವುದು ಮತ್ತು ಅಳುವುದು
ತುಪ್ಪಟ ಹೊಂದಿರುವ ಪ್ರಾಣಿಗಳ ಕೇಶ ಮತ್ತು ಪಕ್ಷಿಯ ಗರಿಗಳು
ದೈಹಿಕ ಪರಿಶ್ರಮ ಮತ್ತು ವ್ಯಾಯಾಮ

ನಿಮ್ಮ ಮಗುವು ಕೇವಲ ಒಂದು ಪ್ರೇರಿತವನ್ನು ಹೊಂದಿರಬಹುದು ಅಥವಾ ಹಲವಾರು ರೀತಿಯವು ಪ್ರೇರಿತಗಳಂತೆ ಉಂಟಾಗುವುದನ್ನು ನೀವು ಗಮನಿಸಬಹುದು. ನಿಮ್ಮ ಮಗುವಿನ ಆಸ್ತಮಾಗೆ ಯಾವುದು ಪ್ರೇರಿತವಾಗಿದೆ ಎಂದು ಒಮ್ಮೆ ನೀವು ತಿಳಿದುಕೊಂಡರೆ, ಈ ಪ್ರೇರಿತಗಳಿಂದ ನಿಯಂತ್ರಿಸಲು ಸೂಕ್ತ ಹಂತಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ. ನಿಮ್ಮ ಮನೆಯಿಂದ ಪ್ರೇರಿತಗಳನ್ನು ತೆಗೆದುಹಾಕಿದಾಗ ಅಥವಾ ಹೊರಗಿರುವುದರಿಂದ ನಿಮ್ಮ ಮಗುವನ್ನು ಪ್ರೇರಿತಗಳಿಂದ ದೂರವಿರಿಸಿ, ನಿಮ್ಮ ಮಗುವು ಆರೋಗ್ಯಕರವಾಗಿರುವಂತೆ ಸಹಾಯ ಮಾಡಿ ಆಸ್ತಮಾ ದಾಳಿಗಳಿಂದ ಸಾಕಷ್ಟು ಮಟ್ಟಿಗೆ ದೂರವಿರಿಸಿ. ನಿಮ್ಮ ಮಗುವಿನ ಆಸ್ತಮಾ ಪ್ರೇರಿತಗಳನ್ನು ಗುರುತಿಸಲು ವೈದ್ಯರೊಂದಿಗೆ ಕಾರ್ಯನಿರ್ವಹಿಸಿ.

ನಿಮ್ಮ ಮಗುವಿನ ಪ್ರೇರಿತವು ಇದೇ ಆಗಿದ್ದಲ್ಲಿ
ಇದನ್ನು ನೀವು ಮಾಡಬಹುದು
 
ಶೀಟ್‌ಗಳು, ಹೊದ್ದಿಗೆಗಳು, ದಿಂಬುಗಳು, ನೆಲಹಾಸುಗಳು, ಮೆತ್ತನೆಯ ಪೀಠೋಪಕರಣಗಳು, ಕಾರ್ಪೆಟ್‌ಗಳು, ಮತ್ತು ನಿಮ್ಮ ಮಗುವಿನ ಜೋಡಿಸಿದ ಆಟಿಕೆ ಸಾಮಾನುಗಳಲ್ಲಿ ದೂಳಿನ ಕ್ರಿಮಿಗಳನ್ನು ಹೊಂದಿರುತ್ತವೆ.







 
ವಾರಕ್ಕೊಮ್ಮೆ ಹಾಸಿಗೆ ವಸ್ತುಗಳನ್ನು ಬಿಸಿ ನೀರಿನಲ್ಲಿ ತೊಳೆಯಿರಿ.
ಸಂಪೂರ್ಣವಾಗಿ ಒಣಗಿಸಿ.
ತಲೆ ದಿಂಬುಗಳು ಮತ್ತು ನೆಲಹಾಸುಗಳ ಮೇಲೆ ದೂಳು ತಡೆಯುವ ಕವರ್‌ಗಳನ್ನು ಬಳಸಿ.
ಕಾರ್ಪೆಟ್‌ಗಳನ್ನು ತಡೆಗಟ್ಟಿ.
ನೀವು ಕಾರ್ಪೆಟ್‌ಗಳನ್ನು ಹೊಂದಿದ್ದರೆ ಅವುಗಳನ್ನು ವ್ಯಾಕ್ಯೂಮ್ ಕ್ಲೀನರ್‌ನಿಂದ ವಾರಕ್ಕೊಮ್ಮೆ ಶುಚಿಗೊಳಿಸಿ ಮತ್ತು ನಿಮ್ಮ ಮಗುವು ಮನೆಯಲ್ಲಿಲ್ಲದಾಗ ಮನೆಯನ್ನು ಧೂಳಿನಿಂದ ಶುಚಿಗೊಳಿಸಿ.
ನೀವು ತೊಳೆಯಬಹುದಾದಂತಹ ಆಟಿಕೆಗಳನ್ನು ಆರಿಸಿಕೊಳ್ಳಿ.
ಆಟಿಕೆಗಳನ್ನು ಬಿಸಿ ನೀರಿನಲ್ಲಿ ತೊಳೆಯಿರಿ.
ಆಟಿಕೆಯೊಂದಿಗೆ ನಿಮ್ಮ ಮಗುವು ಆಟವಾಡುವ ಮೊದಲು
ಸಂಪೂರ್ಣವಾಗಿ ಒಣಗಿಸಿ.
 

 
ನಿಮ್ಮ ಮನೆಯಲ್ಲಿರುವ ಪ್ರಾಣಿಗಳು, ಅಂದರೆ ಬೆಕ್ಕುಗಳು ಮತ್ತು ನಾಯಿಗಳು.







 
ಸಾಕುಪ್ರಾಣಿಯ ಕೇಶ ಮತ್ತು ಧೂಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡಲು ವಾರಕ್ಕೊಮ್ಮೆ ವ್ಯಾಕ್ಯೂಮ್ ಕ್ಲೀನರ್‌ನಿಂದ ಶುಚಿಗೊಳಿಸಿ.
ತುಪ್ಪಟ ಇರುವ ಮತ್ತು ರೆಕ್ಕೆ ಇರುವ ಸಾಕುಪ್ರಾಣಿಗಳನ್ನು ಒಟ್ಟಿಗೆ ಇರಿಸಿಕೊಳ್ಳುವುದನ್ನು ತ್ಯಜಿಸಿ. ಅವುಗಳನ್ನು ನಿಮ್ಮ ಮನೆಯ ಮುಖ್ಯ ಸ್ಥಳ ಮತ್ತು ಮಲಗುವ ಪ್ರದೇಶಗಳಿಂದ ದೂರವಿರಿಸಿ.
ನೀವು ಸಾಕುಪ್ರಾಣಿಯನ್ನು ಇಟ್ಟುಕೊಳ್ಳುವುದಾದರೆ, ಮೀನನ್ನು ಸಾಕಿ.
 

 
ಆಹಾರ






 
ಹಲವಾರು ಮಂದಿ ಆಸ್ತಮಾದೊಂದಿಗೆ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಬೇಕಾಗಿಲ್ಲದಿದ್ದರೂ, ಕೆಲವು ಮಕ್ಕಳು ಬೀಜಗಳು, ಮೊಟ್ಟೆಗಳು, ಹಸುವಿನ ಹಾಲು, ಶೆಲ್ ಮೀನು, ಕೃತಕ ಬಣ್ಣದೊಂದಿಗೆ ಅಲರ್ಜಿ ಹೊಂದಿರುತ್ತಾರೆ... ದಯವಿಟ್ಟು ನಿಮ್ಮ ಮಗುವಿನ ಪ್ರೇರಿತದ ಬಗ್ಗೆ ಗಮನವಿರಿಸಿ, ಅವರನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಿ ಮತ್ತು ಅದಕ್ಕೆ ತಕ್ಕಂತೆ ವೈದ್ಯರಿಗೆ ತಿಳಿಸಿ.
 

 
ವ್ಯಾಯಾಮ
















 
ಆಸ್ತಮಾಗೆ ಉತ್ತಮ ವ್ಯಾಯಾಮವೆಂದರೆ ಯೋಗ ಮತ್ತು ಈಜುವುದು ಮತ್ತು ಸ್ವಲ್ಪಮಟ್ಟಿಗೆ ಓಡುವುದು, ಅವುಗಳು ಸತತ ಓಡುವುದನ್ನು ಒಳಗೊಂಡಿರುವುದಿಲ್ಲ. ಕೆಲವು ಆಸ್ತಮಾ ಮಕ್ಕಳು ವ್ಯಾಯಾಮದ ಮೊದಲು ಉಪಶಮನಕಾರಿ/ತಡೆಗಟ್ಟುವುದನ್ನು ಬಳಸುವ ಮೂಲಕ ಲಾಭ ಪಡೆಯುತ್ತಾರೆ.
ಅವನು ಅಥವಾ ಅವಳು ಒಂದು ನಿರ್ದಿಷ್ಟ ಕ್ರೀಡೆಯನ್ನು ಆಡುವ ಮೊದಲು ನಿಮ್ಮ ಮಗುವಿನ ವೈದ್ಯರೊಂದಿಗೆ ಪ್ರಸ್ತಾಪಿಸಿ.
ತುರ್ತುಪರಿಸ್ಥಿತಿಯಲ್ಲಿ ಸೌಮ್ಯವಾಗಿರುವಂತೆ ಮತ್ತು ಉಪಾಧ್ಯಾಯರಿಗೆ ತಕ್ಷಣ ತಿಳಿಸುವಂತೆ ನಿಮ್ಮ ಮಗುವಿಗೆ ಕಲಿಸಿ.
ನಿಮ್ಮ ಮಗುವಿನ ಉಪಶಮನವನ್ನು ಯಾವಾಗಲೂ ತಕ್ಷಣ ದೊರೆಯುವಂತೆ ಕಿಟ್‌ನಲ್ಲಿ ಹೆಚ್ಚುವರಿ ಪ್ಯಾಕ್‌ನೊಂದಿಗೆ ಇರಿಸಿ, ಮತ್ತು ನಿಮ್ಮ ದೂರವಾಣಿ ಸಂಖ್ಯೆ ಸೇರಿದಂತೆ ತುರ್ತುಪರಿಸ್ಥಿತಿ ಸೂಚನೆಗಳನ್ನು ಶಾಲೆಗೆ ಲಿಖಿತವಾಗಿ ನೀಡಿ.
 

 
ಜಿರಳೆಗಳು





 
ಕೌಂಟರ್‌ಗಳು, ಸಿಂಕ್‌ಗಳು, ಟೇಬಲ್‌ಗಳು, ಮತ್ತು ನೆಲವನ್ನು ಶುಭ್ರವಾಗಿರಿಸಿಕೊಳ್ಳಿ ಮತ್ತು ಗಲಿಜಿನಿಂದ ಮುಕ್ತವಾಗಿರಿಸಿ.
ಶುಚಿ ಇಲ್ಲದ ಖಾದ್ಯಗಳನ್ನು ಸಿಂಕ್‌ನಲ್ಲಿ ಇಡೀ ರಾತ್ರಿ ಬಿಡಬೇಡಿ.
ಆಹಾರವನ್ನು ಗಾಳಿಮುಕ್ತ ಡಬ್ಬಗಳಲ್ಲಿ ಸಂಗ್ರಹಿಸಿ.
ಟ್ರ್ಯಾಶ್ ಕ್ಯಾನ್‌ಗಳನ್ನು ಆವರಿಸಿ.
 

 
ತೇವ ಪ್ರದೇಶಗಳಾದಂತಹ ಅಡಿಗೆಮನೆ, ಶೌಚಾಲಯಗಳು, ಮತ್ತು ನೆಲಮಾಳಿಗೆಯಲ್ಲಿ ಬೆಳೆಯುವಂತಹ ಅಣಬೆಗಳು.







 
ಅಣಬೆ ಅಥವಾ ಫಂಗಸ್ ಅನ್ನು ನೀವು ಎಲ್ಲಿಯಾದರೂ ವೀಕ್ಷಿಸಿದರೆ ಅದನ್ನು ಸೋಪು ಮತ್ತು ನೀರಿನಿಂದ ಶುಭ್ರಗೊಳಿಸಿ. ಆ ಪ್ರದೇಶವು ಸಂಪೂರ್ಣವಾಗಿ ಒಣಗಲು ಬಿಡಿ.
ಸ್ನಾನ ಮಾಡುವಾಗ, ಅಡಿಗೆ ಮಾಡುವಾಗ, ಅಥವಾ ಖಾದ್ಯಗಳನ್ನು ತೊಳೆಯುವಾಗ ಶೌಚಾಲಯ ಮತ್ತು ಅಡಿಗೆ ಮನೆಯಲ್ಲಿ ಎಕ್ಸಾಸ್ಟ್ ಫ್ಯಾನ್‌ಗಳನ್ನು ಬಳಸಿ ಅಥವಾ ಕಿಟಕಿಯನ್ನು ತೆರೆದಿಡಿ.
ಅಣಬೆಗಳು ಬೆಳೆಯುವುದನ್ನು ತಪ್ಪಿಸಲು
ನೀರು ಪೋಲಾಗುವುದನ್ನು ತಕ್ಷಣ ಸರಿಪಡಿಸಿ.
ಅಣಬೆ ಬೆಳೆಯುವುದನ್ನು ತಪ್ಪಿಸಲು
ತನವಿನ ಅಥವಾ ತೇವವಾದ ವಸ್ತುಗಳನ್ನು ಒಣಗಿಸಿ ಇರಿಸಿ.
 

 
ಧೂಮಪಾನ ಮತ್ತು ಹೊರಗಿನ ವಾಯು ಮಾಲಿನ್ಯ


























 
ನಿಮ್ಮ ಮಗುವಿನ ಹತ್ತಿರ ಧೂಮಪಾನ ಮಾಡಬೇಡಿ ಅಥವಾ ಯಾರನ್ನಾದರೂ ಧೂಮಪಾನ ಮಾಡಲು ಅಥವಾ ನಿಮ್ಮ ಮನೆಯಲ್ಲಿಯೂ ಸಹ ಧೂಮಪಾನ ಮಾಡುವುದನ್ನು ಅನುಮತಿಸಬೇಡಿ.
ಕುಟುಂಬದ ಸದಸ್ಯರನ್ನು ಮನೆಯ ಹೊರಗೆ ಧೂಮಪಾನ ಮಾಡುವಂತೆ ಹೇಳಿ, ಹೊಗೆಯು ಪರದೆಗಳು, ಸೋಫಾ ಮತ್ತು ಕಾರ್ಪೆಟ್‌ಗಳಲ್ಲಿ ಹೆಚ್ಚು ಕಾಲ ಆವರಿಸಿಕೊಳ್ಳುವುದರಿಂದ ಇದು ನಿಮ್ಮ ಮಗುವಿಗೆ ಮುಖ್ಯವಾದ ಪ್ರೇರಿತವಾಗಿರಬಹುದಾಗಿದೆ.
ಗಾಳಿಯ ಗುಣಮಟ್ಟವು ಉತ್ತಮವಾಗಿರುವಾಗ ನಿಮ್ಮ ಮಗುವು ಹೊರಾಂಗಣಗಳಲ್ಲಿ ಆಟವಾಡುವಂತೆ ಅನುಮತಿಸಿ.
ಹೆಚ್ಚು ಕಾಲದವರೆಗೆ ಓಡುವುದನ್ನು ಒಳಗೊಂಡಿರುವ ಹೊರಾಂಗಣ ಆಟಗಳನ್ನು ಮಿತಿಗೊಳಿಸಿ.
ನಿಮ್ಮ ಮಗುವಿನ ಆಸ್ತಮಾ ಎಚ್ಚರಿಕೆ ಚಿಹ್ನೆಗಳಿಗೆ ಹೆಚ್ಚು ಗಮನಹರಿಸಿ. ಚಿಹ್ನೆಗಳನ್ನು ನೀವು ವೀಕ್ಷಿಸಲು ಪ್ರಾರಂಭಿಸಿದರೆ, ಹೊರಾಂಗಣದ ಚಟುವಟಿಕೆಯನ್ನು ಮಿತಿಗೊಳಿಸಿ. ನಿಮ್ಮ ಮಗುವಿನ ವೈದ್ಯರಲ್ಲಿ ಇದರ ಕುರಿತು ಮಾತನಾಡುವಲ್ಲಿ ಖಚಿತವಾಗಿರಿ.
ಕೆಲವು ಉತ್ಪನ್ನಗಳನ್ನು ನೀವು ಬಳಸಿದಾಗ ನಿಮ್ಮ ಮಗುವಿನ ಆಸ್ತಮಾ ತೀವ್ರಗೊಳ್ಳುವುದನ್ನು ನೀವು ಗಮನಿಸಿದಲ್ಲಿ, ಬೇರೆಯ ಉತ್ಪನ್ನಗಳನ್ನು ಪ್ರಯತ್ನಿಸುವುದನ್ನು ಪ್ರಯತ್ನಿಸಿ. ನಿಮ್ಮ ಮಗುವು ಉತ್ಪನ್ನಗಳಲ್ಲಿನ ರಾಸಾಯನಿಕಗಳಿಗೆ ಅಲರ್ಜಿ ಹೊಂದಿರಬಹುದು. ಒಂದು ಸೊಳ್ಳೆ ಬತ್ತಿಯ ಬಳಕೆಯಿಂದಾಗಿ 75 ರಿಂದ 137 ಸಿಗರೇಟುಗಳನ್ನು ಸುಟ್ಟಷ್ಟು ವಾಯು ಮಾಲಿನ್ಯವೇರ್ಪಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
 

 
ಶುಚಿಗೊಳಿಸುವುದು, ಪೇಂಟ್‌ಗಳು, ಅಂಟುಗಳು, ಕೀಟನಾಶಕಗಳು, ಕಾಸ್ಮೆಟಿಕ್‌ಗಳು, ಸೊಳ್ಳೆ ಬತ್ತಿಗಳು ಅಥವಾ ಏರ್ ಫ್ರೆಶ್ನರ್‌ಗಳು ಸೇರಿದಂತೆ ರಾಸಾಯನಿಕ ಕಿರಿಕಿರಿಗಳು.

 
ನೀವು ಉತ್ಪನ್ನವನ್ನು ಬಳಸಬೇಕಾದಲ್ಲಿ, ನಿಮ್ಮ ಮಗುವು ಹತ್ತಿರವಿಲ್ಲದಂತೆ ಖಚಿತಪಡಿಸಿಕೊಳ್ಳಿ.
ಕಿಟಕಿಗಳು ಅಥವಾ ಬಾಗಿಲುಗಳನ್ನು ತೆರೆಯಿರಿ, ಅಥವಾ ಎಕ್ಸಾಸ್ಟ್ ಫ್ಯಾನ್ ಅನ್ನು ಬಳಸಿ.
ಲೇಬಲ್‌ನ ಮೇಲಿರುವ ಸೂಚನೆಗಳನ್ನು ಯಾವಾಗಲೂ ಅನುಸರಿಸುವಂತೆ ಜ್ಞಾಪಕದಲ್ಲಿರಿಸಿಕೊಳ್ಳಿ.
 


ದಯವಿಟ್ಟು ಗಮನಿಸಿ: ಇದು ಎಲ್ಲಾ ಒಳಗೊಂಡಿರುವ ಪ್ರೇರಣೆಗಳಾಗಿಲ್ಲ. ನಿಮ್ಮ ಮಗುವು ಆಸ್ತಮಾ ಹೊಂದಿದ್ದರೆ ನಿಮ್ಮ ಮಗುವಿನ ಪ್ರೇರಿತವನ್ನು ನೀವು ಗಮನಿಸಬೇಕು ಮತ್ತು ಅದರೊಂದಿಗಿನ ಸಂಪರ್ಕವನ್ನು ತಪ್ಪಿಸುವಂತೆ ನಿಮ್ಮ ಮಗುವಿಗೆ ನೀವು ತಿಳಿಸಬೇಕು. ನಿಮ್ಮ ಮಗುವಿನ ಪ್ರೇರಿತಗಳು, ಲಕ್ಷಣಗಳು ಮತ್ತು ಚಿಕಿತ್ಸೆಯ ಕುರಿತು ಯಾವುದಾದರೂ ಸಂದೇಹಗಳಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ



  ©2010 Breathe Free,ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.