ಅಲರ್ಜಿಕ್ ರಿನಿಟಿಸ್

ಕುರಿತು

ನಿಮ್ಮ ಸುತ್ತುಮುತ್ತು ಧೂಳು ಇರುವಾಗ ಅಥವಾ ಧೂಮಪಾನ ಮಾಡುತ್ತಿದ್ದಾಗ, ನೀವೇ ಪದೇ ಪದೇ ಸೀನುವುದನ್ನು ನೀವು ಕಂಡದ್ದೀರಾ? ಹೌದಾದರೆ, ಆವಾಗ ನೀವು ಅವುಗಳಿಗೆ ಅಲರ್ಜಿ ಹೊಂದಿರುವ ತುಂಬಾ ಸಾಧ್ಯತೆ ಇದೆ.

ನಿಮ್ಮ ದೇಹದ ರಕ್ಷಣಾ ವ್ಯವಸ್ಥೆಯು (ಪ್ರತಿರಕ್ಷಣಾ ವ್ಯವಸ್ಥೆ ಎಂದೂ ಕೂಡಾ ತಿಳಿಯಲ್ಪಡುತ್ತದೆ) ನಿಮಗೆ ಸೂಕ್ಷ್ಮ ಜೀವಾಣುಗಳಂಥಹ (ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳು) ಹಾನಿಕಾರಕ ವಸ್ತುಗಳ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ ಮತ್ತು ನಿಮ್ಮನ್ನು ರಕ್ಷಿಸುತ್ತದೆ. ನೀವು ಯಾವುದಕ್ಕಾದರೂ ಅಲರ್ಜಿ ಹೊಂದಿದ್ದಾಗ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಕರವಾಗಿರದ ಯಾವುದರಿಂದಲೂ ಸಸ್ಯಗಳಿಂದ ಮತ್ತು ಮರಗಳಿಂದ ಧೂಳು ಅಥವಾ ಪರಾಗ ಮತ್ತು ಕೆಲವೊಮ್ಮೆ, ಕೆಲವು ಆಹಾರ ಪದಾರ್ಥಗಳೂ ಸಹ ಇತ್ಯಾದಿ - ನಿಮ್ಮನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದರ್ಥ. ಒಂದು ಅಲರ್ಜಿಯು ಚರ್ಮ, ಕಣ್ಣುಗಳು ಮತ್ತು ಮೂಗು ಗಳಂತಹ ದೇಹದ ಯಾವುದೇ ಭಾಗದ ಮೇಲೆ, ಪರಿಣಾಮ ಬೀರಬಹುದು.

 

"ನೀವು ಯಾವುದಕ್ಕಾದರೂ ಅಲರ್ಜಿ ಹೊಂದಿದ್ದಾಗ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಕರವಾಗಿರದ ಯಾವುದರಿಂದಲೂ ನಿಮ್ಮನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದರ್ಥ"

ಅಲರ್ಜಿಗಳು ತುಂಬಾ ಸಾಮಾನ್ಯ ಮತ್ತು ಯಾರ ಮೇಲಾದರೂ ಪರಿಣಾಮ ಬೀರಬಹುದು. ಆದಾಗ್ಯೂ, ನಿಮ್ಮ ಕುಟುಂಬದ ಯಾವುದೇ ಸದಸ್ಯರು ಅಲರ್ಜಿಗಳ ಒಂದು ಇತಿಹಾಸವನ್ನು ಹೊಂದಿದ್ದರೆ, ಆಗ ನೀವು ಒಂದು ಅಲರ್ಜಿಯನ್ನು ಬೆಳೆಸಿಕೊಳ್ಳುವ ಅಧಿಕ ಸಾಧ್ಯತೆಯಿರುತ್ತದೆ.

ಅಲರ್ಜಿಕ್ ರಿನಿಟಿಸ್ ಎಂಬುದು ನಿರ್ದಿಷ್ಟವಾಗಿ ಮೂಗಿನ ಮೇಲೆ ಪರಿಣಾಮ ಬೀರುವ ಒಂದು ಅಲರ್ಜಿಯನ್ನು ಸೂಚಿಸುತ್ತದೆ. ನೀವು ಅಲರ್ಜಿ ಹೊಂದಿರುವ ಏನನ್ನಾದರೂ ನೀವು ಉಸಿರಾಡಿದಾಗ, ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಇವುಗಳನ್ನು ಅಲರ್ಜಿನ್‌ಗಳೆಂದು ತಿಳಿಯಲಾಗುತ್ತದೆ. ಅತ್ಯಂತ ಸಾಮಾನ್ಯ ಅಲರ್ಜಿನ್‌ಗಳೆಂದರೆ:

  • ಪರಾಗ ಮತ್ತು ಹೊಗೆಯಂತಹ ಹೊರಾಂಗಣ ಅಲರ್ಜಿನ್‌ಗಳು

  • ಧೂಳು ಹುಳಗಳು, ಸಾಕುಪ್ರಾಣಿ ಕೂದಲು ಅಥವಾ ಡ್ಯಾಂಡರ್ ಮತ್ತು ಬೂಷ್ಟು (ಶಿಲೀಂಧ್ರ)ನಂಥಹ ಒಳಾಂಗಣ ಅಲರ್ಜಿನ್‌ಗಳು

  • ಸಿಗರೇಟ್ ಹೊಗೆ, ಸುಗಂಧಗಳು, ರಾಸಾಯನಿಕ ವಸ್ತುಗಳು ಮತ್ತು ನಿಷ್ಕಾಸ ಹೊಗೆಯಂತಹ ಇತರ ಉದ್ರೇಕಕಾರಿಗಳು

ಸ್ಪಷ್ಟವಾಗಿ ಹೇಳುವುದಾದರೆ, ಎರಡು ರೀತಿಯ ಅಲರ್ಜಿಕ್ ರಿನಿಟಿಸ್ಗಳಿವೆ - ಕಾಲೋಚಿತ ಮತ್ತು ಸಾರ್ವಕಾಲಿಕ.

ಕಾಲೋಚಿತ ಅಲರ್ಜಿಕ್ ರಿನಿಟಿಸ್ ಎಂದರೆ ನಿಮ್ಮ ಲಕ್ಷಣಗಳು ವರ್ಷದಲ್ಲಿ ಕೆಲವು ಅವಧಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ ಅಥವಾ ಹದಗೆಡುತ್ತವೆ. ವರ್ಷದ ಕೆಲವು ಅವಧಿಗಳಲ್ಲಿ ಸಮೃದ್ಧವಾಗಿ ಕಂಡುಬರುವ ಪರಾಗದಂಥಹುದು ನಿಮ್ಮ ಅಲರ್ಜಿನ್‌ವಾಗಿದ್ದರೆ, ಇದು ಹೆಚ್ಚು ಸಾಮಾನ್ಯವಾಗಿರುತ್ತದೆ

ಸಾರ್ವಕಾಲಿಕ ಅಲರ್ಜಿಕ್ ರಿನಿಟಿಸ್ ಮತ್ತೊಂದೆಡೆ ನೀವು ವರ್ಷವಿಡೀ ಲಕ್ಷಣಗಳನ್ನು ಹೊಂದಿರುತ್ತೀರಿ. ಧೂಳು, ಹೊಗೆ, ಧೂಳು ಹುಳಗಳು ಮುಂತಾದ ವರ್ಷವಿಡೀ ಇರುವ ವಸ್ತುಗಳಿಗೆ ನೀವು ಅಲರ್ಜಿ ಹೊಂದಿರುವಾಗ ಇದು ಹೆಚ್ಚು ಸಾಮಾನ್ಯವಾಗಿರುತ್ತದೆ.

 

ಬಲಗೈ ಬದಿಯ ಬ್ಯಾನರುಗಳು

ಬಲಗೈ ಬದಿಯ ಬ್ಯಾನರು #1 - ಪುಷ್ಪೇಂದ್ರ ಸಿಂಗ್ ತನ್ನ ಅಲರ್ಜಿಕ್ ರಿನಿಟಿಸ್ ಅನ್ನು ಜಯಿಸಿದ್ದಾನೆ ಮತ್ತು ಒಳ್ಳೆಯ ಜೀವನವನ್ನು ನಡೆಸುತ್ತಿದ್ದಾನೆ. (ಸ್ಫೂರ್ತಿದಾಯಕ ಕಥೆ)

ಬಲಗೈ ಬದಿಯ ಬ್ಯಾನರು #2 - ಅಲರ್ಜಿಯಿರುವ ಎಲ್ಲರಿಗೂ ಅಲರ್ಜಿಕ್‌ ರಿನಿಟಿಸ್ ಇರುತ್ತದೆಯೇ? [ಪದೇಪದೇ ಕೇಳುವ ಪ್ರಶ್ನೆಗಳು]

ಬಲಗೈ ಬದಿಯ ಬ್ಯಾನರು 3 - ತಮ್ಮ ಉಸಿರಾಟದ ಸಮಸ್ಯೆಗಳನ್ನು ಯಶಸ್ವಿಯಾಗಿ ಜಯಿಸಿದ ಜನರೊಂದಿಗೆ ಸಂಪರ್ಕ ಸಾಧಿಸಲು ಸಮುದಾಯವನ್ನು (ಬ್ರೀಥ್ಫ್ರೀ ಸಮುದಾಯ) ಸೇರಿ

Please Select Your Preferred Language