ಅನಂಗೀಕಾರ

ಈ ವೆಬ್‌ಸೈಟ್ www.breathefree.com ("ವೆಬ್‌ಸೈಟ್") ಉಸಿರಾಟದ ಕಾಯಿಲೆಗಳ ಬಗ್ಗೆ ಸಾಮಾನ್ಯ ಮಾಹಿತಿಯನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ವೆಬ್‌ಸೈಟ್ ಮತ್ತು ಮಾಹಿತಿ, ಸುದ್ದಿ ಮತ್ತು ಪಠ್ಯ, ಗ್ರಾಫಿಕ್ಸ್, ಚಿತ್ರಗಳು ಮತ್ತು ವೆಬ್‌ಸೈಟ್‌‌ನಲ್ಲಿ ("ಮಾಹಿತಿ") ಒಳಗೊಂಡಿರುವ ಯಾವುದೇ ಇತರ ವಸ್ತುಗಳ ಬಳಕೆಗೆ ಅನ್ವಯಿಸುವ ನಿಯಮಗಳು ಮತ್ತು ಷರತ್ತುಗಳು ಇಲ್ಲಿವೆ. ಈ ನಿಯಮಗಳು ಮತ್ತು ಷರತ್ತುಗಳು, ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಯಾವುದೇ ಬಳಕೆದಾರರಿಗೆ, ವೆಬ್‌ಸೖಟ್‌ನಲ್ಲಿ ಕಾಣುವ ಭವಿಷ್ಯದ ರೋಗಿ ಅಥವಾ ಅವರ ಸಂಬಂಧಿಕರು / ಸ್ನೇಹಿತರು ("ಬಳಕೆದಾರ"), ಮತ್ತು ವೈದ್ಯಕೀಯ ಅಥವಾ ಆರೋಗ್ಯ ಆರೈಕೆ ಪ್ರಾಕ್ಟೀಷನರ್ / ಆಸ್ಪತ್ರೆ / ರೋಗನಿದಾನ ಕೇಂದ್ರ / ಚಿಕಿತ್ಸಾಲಯ / ಔಷಧಿ ವ್ಯಾಪಾರ ಅಂಗಡಿಗಳು ಇತ್ಯಾದಿಗಳನ್ನು ಒಳಗೊಂಡು, ಅನ್ವಯವಾಗುತ್ತವೆ. ("ಸೇವೆ ಒದಗಿಸುವವರು"). 

ಈ ವೆಬ್‌ಸೈಟ್‌ನ ವಿಷಯವನ್ನು ಮಾಹಿತಿಯಂತೆ ಮಾತ್ರ ನೀಡಲಾಗುತ್ತದೆ ಮತ್ತು ಇದು ವೈದ್ಯಕೀಯ ಸಲಹೆಯ ವಿಜ್ಞಾಪನೆ ಅಥವಾ ನೀಡುವಿಕೆಯನ್ನು ಒಳಗೊಳ್ಳುವುದಿಲ್ಲ. ಬಳಕೆದಾರರ ನ್ಯಾಯಕ್ಷೇತ್ರದಲ್ಲಿ ವೃತ್ತಿಯನ್ನು ನಡೆಸಲು ಅಧಿಕಾರ ಪಡೆದಿರುವ ಪರವಾನಗಿ ಪಡೆದ ಆರೋಗ್ಯ ಆರೈಕೆ ಪ್ರ್ಯಾಕ್ಟೀಷನರಿಂದ ವೈದ್ಯಕೀಯ ಸಲಹೆಯನ್ನು ಪಡೆಯುವುದಕ್ಕೆ ಪರ್ಯಾಯವಾಗಿ ಇಲ್ಲಿನ ವಿಷಯವನ್ನು ಬಳಸಬಾರದು. ಬಳಕೆದಾರರು, ಅನ್ಯಥಾ ಮೊದಲು ಅವನ/ಅವಳ ಫಿಜೀಶಿಯನ್ನರ ಜೊತೆ ಸಮಾಲೋಚಿಸದೆ, ಅಥವಾ ಈ ವೆಬ್‌ಸೈಟ್‌ನಲ್ಲಿ ವಿವರಿಸಿರಬಹುದಾದ ಅಥವಾ ಶಿಫಾರಸು ಮಾಡಬಹುದಾದ ಯಾವುದೇ ಔಷಧೋಪಚಾರ, ಆಹಾರ ಪೂರಕ ಅಥವಾ ಚಿಕಿತ್ಸೆಯನ್ನು ತೆಗೆದುಕೊಳ್ಳಬಾರದು ಅಥವಾ ಆರಂಭಿಸಕೂಡದು. ಈ ಸೈಟಿನಲ್ಲಿ ಒಳಗೊಂಡಿರುವ ಮಾಹಿತಿಯ ಮೇಲೆ ಯಾವುದೇ ವ್ಯಕ್ತಿಯು ಭರವಸೆ ಇಟ್ಟರೆ ಅದಕ್ಕೆ ಸಿಪ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಅಂತಹ ಮಾಹಿತಿಗೆ ಸಂಬಂಧಿಸಿದಂತೆ ಎಲ್ಲಾ ಬಾಧ್ಯತೆಯನ್ನು ನಿರಾಕರಿಸುತ್ತಾರೆ. ಪರವಾನಗಿ ಪಡೆದ ಆರೋಗ್ಯ ಆರೈಕೆ ಪ್ರ್ಯಾಕ್ಟೀಷನರಿಂದ ವೈದ್ಯಕೀಯ ಸಲಹೆಯನ್ನು ಪಡೆಯದೆ ನೀವು ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯ ಮೇಲೆ ಕಾರ್ಯ ನಿರ್ವಹಿಸಬಾರದು 

 ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ಮೌಲ್ಯಮಾಪನ ಮಾಡುವ ಸಲುವಾಗಿ ಬಳಕೆದಾರರು ಅವನು/ಅವಳು ಮಾಡಬೇಕಾದ ಅವನ/ಅವಳ ಸ್ವಂತ ತೀರ್ಪಿಗೆ  ಈ ವೆಬ್‌ಸೈಟ್‌ನ ವಿಷಯಗಳನ್ನು ಪರ್ಯಾಯವಾಗಿರಿಸಲು ಅನುವು ಮಾಡಬಾರದು. ವೆಬ್‌ಸೈಟ್‌ನಲ್ಲಿನ ಸೇವೆಗಳನ್ನು ಒದಗಿಸುವವರು ವೆಬ್‌ಸೈಟ್‌ನಲ್ಲಿ ಸೂಚಿಸಿರುವ ಸಮಯದಲ್ಲಿ ಲಭ್ಯವಿಲ್ಲದಿರಬಹುದು ಅಥವಾ ಈ ವೆಬ್‌ಸೈಟ್‌ನೊಂದಿಗಿನ ಅವರ ಸಂಬಂಧವನ್ನು ಸ್ಥಗಿತಗೊಳಿಸಬಹುದು ಎಂಬುದಕ್ಕೆ ಬಳಕೆದಾರರು ಒಪ್ಪಿಕೊಳ್ಳುತ್ತಾರೆ.

ವೃತ್ತಿ ಮಾಡಲು ಅವನು / ಅವಳು / ಅದು ಸಿಂಧುವಾದ ಪರವಾನಗಿಯ(ಗಳ)ನ್ನು ಹೊಂದಿದ್ದಾನೆ/ಳೆ/ಹೊಂದಿದೆ ಮತ್ತು ಸಂಬಂಧಪಟ್ಟ ಶಾಸನಬದ್ಧ ಪ್ರಾಧಿಕಾರಿಗಳೊಂದಿಗೆ ನೋಂದಣಿ ಮಾಡಲಾಗಿದೆ ಮತ್ತು ಅನ್ವಯಿಸುವ ಎಲ್ಲಾ ಕಾನೂನುಗಳನ್ನು ಪಾಲಿಸಲಾಗುತ್ತದೆ ಎಂದು ಆಶ್ವಾಸನೆ ನೀಡಲು ಸೇವೆ ಒದಗಿಸುವವರು ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತಾರೆ. ಈ ಷರತ್ತಿನ ಉಲ್ಲಂಘನೆಯು ಸಂಬಂಧಿಸಿದ ಸೇವಾ ಒದಗಿಸುವವರನ್ನು  ಅದರಿಂದ ಉಂಟಾಗುವ ಕಾನೂನು ಕ್ರಮಕ್ಕೆ ಅಥವಾ ಇತರ ಪರಿಣಾಮಗಳಿಗೆ ಸಂಪೂರ್ಣವಾಗಿ ಹೊಣೆಗಾರರನ್ನಾಗಿ ಮಾಡುತ್ತದೆ.

ಈ ಸೈಟ್ ತಪ್ಪುಗಳು ಅಥವಾ ಲೋಪದಿಂದ ಮುಕ್ತವಾಗಿದೆಯೆಂದು ಖಾತ್ರಿಪಡಿಸಿಕೊಳ್ಳಲು ಕಾಳಜಿ ಮತ್ತು ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗಿದೆಯಾದರೂ, ಈ ವೆಬ್‌ಸೈಟ್‌ನಲ್ಲಿ ಪ್ರಕಟಿಸಲ್ಪಟ್ಟ ಯಾವುದೇ ವಸ್ತು ಅಥವಾ ಮಾಹಿತಿಯ ಆಧಾರದ ಮೇಲೆ ತೆಗೆದುಕೊಳ್ಳಲಾದ ಯಾವುದೇ  ಕ್ರಮ, ವ್ಯಕ್ತಪಡಿಸಿದ ಅಭಿಪ್ರಾಯಗಳು, ನೀಡಲಾದ ಅಥವಾ ಒಪ್ಪಿಕೊಂಡ ಸಲಹೆ, ಯಾವುದೇ ನೇರವಾದ ಪ್ರಾಸಂಗಿಕ, ವಿಶೇಷ ಅಥವಾ ಪರಿಣಾಮವಾಗಿ ಉಂಟಾಗುವ ನಷ್ಟ ಮತ್ತು ಹಾನಿಗೆ, ಸಿಪ್ಲಾ ಲಿಮಿಟೆಡ್ ಅವರು ಯಾವುದೇ ರೀತಿಯಲ್ಲಿ ಹೊಣೆಗಾರರಾಗಿರುವುದಿಲ್ಲ.