ಇನ್ಹೇಲರ್

ಇನ್ಹೇಲರ್‌ಗಳು ಏಕೆ ಉತ್ತಮ

ವಿಶ್ವದಾದ್ಯಂತ, ಇನ್ಹೇಲರ್‌ಗಳನ್ನು ಸಿರಪ್‌ಗಳು ಮತ್ತು ಮಾತ್ರೆಗಳಿಗೆ ವಿರುದ್ಧವಾಗಿ, ಅಸ್ತಮಾ  ಮತ್ತು ಸಿಒಪಿಡಿಯಂತಹ ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಸ್ವೀಕರಿಸಲಾಗಿದೆ.  

ಇನ್ಹೇಲರ್‌ಗಳೊಂದಿಗೆ, ಔಷಧವು ನೇರವಾಗಿ ಶ್ವಾಸಕೋಶಗಳಲ್ಲಿನ ವಾಯುಮಾರ್ಗಗಳಿಗೆ, ಅದು ನಿಖರವಾಗಿ ಎಲ್ಲಿ ಕೆಲಸ ಮಾಡಬೇಕೋ ಅಲ್ಲಿಗೆ, ಕೆಲವೇ ಸೆಕೆಂಡುಗಳಲ್ಲಿ  ತಲುಪುತ್ತದೆ ಮತ್ತು ಉಪಶಮನವನ್ನು ಒದಗಿಸುತ್ತದೆ. ಮತ್ತೊಂದೆಡೆ ಮಾತ್ರೆಗಳು ಮತ್ತು ಸಿರಪ್‌ಗಳನ್ನು ಸೇವಿಸಬೇಕಾಗಿರುತ್ತದೆ, ಅರ್ಥಾತ್ ಅವುಗಳು ಮೊದಲು ಹೊಟ್ಟೆ ಮತ್ತು ರಕ್ತಪ್ರವಾಹವನ್ನು ಮತ್ತು ನಂತರ ಶ್ವಾಸಕೋಶಗಳನ್ನು ತಲುಪಬೇಕು. ಹಾಗಾಗಿ, ಅವು ತ್ವರಿತ ಉಪಶಮನವನ್ನು ನೀಡುವುದಿಲ್ಲ. 

ಅಲ್ಲದೆ, ಇನ್ಹೇಲರ್ ಔಷಧವು ಸಮಸ್ಯೆಯ ಪ್ರದೇಶವನ್ನು ನೇರವಾಗಿ ತಲುಪುವುದರಿಂದ, ತೆಗೆದುಕೊಳ್ಳುವ ಆವಶ್ಯಕತೆ ಇರಬೇಕಾದ ಡೋಸ್, ಇದು ಮಾತ್ರೆಗಳು ಮತ್ತು ಸಿರಪ್‌ಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿರುತ್ತದೆ. 

ಅನೇಕ ಜನರು ನಂಬುವುದಕ್ಕೆ ಭಿನ್ನವಾಗಿ, ಇನ್ಹೇಲರ್‌ಗಳು ಕನಿಷ್ಠ ಅಡ್ಡ ಪರಿಣಾಮಗಳು ಹೊಂದಿರುತ್ತವೆ, ಏಕೆಂದರೆ ಒಂದು ತುಂಬಾ ಕಡಿಮೆ ಪ್ರಮಾಣದ ಔಷಧವು ದೇಹವನ್ನು ಪ್ರವೇಶಿಸುತ್ತದೆ. 

ಆದ್ದರಿಂದ, ನೀವು ಅಥವಾ ನಿಮ್ಮ ಮಗುವು ಚಿಂತಿಸದೆ ಇನ್ಹೇಲರ್‌ಗಳನ್ನು ಬಳಸಬಹುದು ಮತ್ತು ನಿಮಗೆ ಅಚ್ಚುಮೆಚ್ಚಿನ ಮತ್ತು ಆನಂದ ನೀಡುವ ಎಲ್ಲವನ್ನು ಮಾಡುವುದನ್ನು ಮುಂದುವರೆಸಬಹುದು. 

Please Select Your Preferred Language