ಇನ್ಹೇಲರ್ಗಳು

ಇನ್ಹೇಲರ್‌ಗಳೊಂದಿಗೆ ಮಾಡಬೇಕಾದದ್ದು ಮತ್ತು ಮಾಡಬಾರದದ್ದು

ಅಸ್ತಮಾ ಮತ್ತು ಸಿಒಪಿಡಿಗಳಂಥಹ ನಿಮ್ಮ ಉಸಿರಾಟದ ಸಮಸ್ಯೆಗಳನ್ನು ಚಿಕಿತ್ಸಿಸಬೇಕಾದಾಗ, ಇನ್ಹೇಲರ್ಗಳೇ ನಿಮ್ಮ ಅತ್ಯುತ್ತಮ ಸ್ನೇಹಿತರು. ನಿಮ್ಮ ಇನ್ಹೇಲರ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಮತ್ತು ನಿಮ್ಮ ಉಸಿರಾಟದ ಸಮಸ್ಯೆಯನ್ನು ನಿಯಂತ್ರಣದಡಿಯೆಲ್ಲಿಟ್ಟುಕೊಳ್ಳಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ. ಇನ್ಹೇಲರ್ ಅನ್ನು ಸರಿಯಾದ ರೀತಿಯಲ್ಲಿ ನೀವು ಬಳಸುತ್ತಿರುವಿರೆಂದು ಖಚಿತಪಡಿಸಿಕೊಳ್ಳಲು ರೋಗಿ ಮಾಹಿತಿ ಕರಪತ್ರದಲ್ಲಿ ನಮೂದಿಸಲಾಗಿರುವ ಸೂಚನೆಗಳನ್ನು ಅನುಸರಿಸಿ (ಇನ್ಹೇಲರ್ ಅನ್ನು ಹೇಗೆ ಬಳಸುವುದು ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ )

 

ಮಾಡಬೇಕಾದದ್ದು-

 • ಗೊಂದಲವನ್ನು ತಪ್ಪಿಸಲು ನಿಮ್ಮ ನಿಯಂತ್ರಕ ಮತ್ತು ಪರಿಹಾರಕ ಇನ್ಹೇಲರ್ಗಳನ್ನು ಲೇಬಲ್ ಮಾಡಿ

 • ನಿಮ್ಮ ತುಟಿಗಳಿಂದ ಇನ್ಹೇಲರಿನ ಕೊಳವಿಯನ್ನು ಮುಚ್ಚುವುದಕ್ಕೆ ಮುಂಚೆ ಸಂಪೂರ್ಣವಾಗಿ ಉಸಿರು ಬಿಡಿ.

 • ಬಾಯಿಯಿಂದ ಇನ್ಹೇಲರ್ ಅನ್ನು ಹೊರತೆಗೆದ ನಂತರ, ಸುಮಾರು 10 ಸೆಕೆಂಡುಗಳ ಕಾಲ, ಅಥವಾ ಎಲ್ಲಿಯವರೆಗೆ ಅದು ಆರಾಮದಾಯಕವಾಗಿರುವುದೋ ಅಲ್ಲಿಯವರೆಗೆ, ನಿಮ್ಮ ಉಸಿರನ್ನು ಹಿಡಿದುಕೊಳ್ಳಿ

 • ಮತ್ತೊಂದು ಡೋಸ್ ಅಗತ್ಯವಿದ್ದರೆ, ಎರಡನೇ ಡೋಸ್ ತೆಗೆದುಕೊಳ್ಳುವ ಮೊದಲು ಕನಿಷ್ಠ 1 ನಿಮಿಷ ಕಾಯಿರಿ

 • ನಿಮ್ಮ ಇನ್ಹೇಲರಿನಲ್ಲಿ ಉಳಿದಿರುವ ಡೋಸುಗಳ ಸಂಖ್ಯೆಯ ಮೇಲೆ ನಿಗಾ ಇಡಿ.

 • ಡೋಸ್ ಕೌಂಟರುಗಳ ಸಂದರ್ಭದಲ್ಲಿ, ಡೋಸ್ ಕೌಂಟರ್ ಬಣ್ಣವು ಹಸಿರು ಬಣ್ಣದಿಂದ ಕೆಂಪು ಬಣ್ಣಕ್ಕೆ ಬದಲಾಗುವಾಗ, ಕಡಿಮೆ ಪ್ರಮಾಣದ ಡೋಸುಗಳನ್ನು ಸೂಚಿಸುತ್ತದೆ, ಹಾಗಾಗಿ ಹೊಸ ಇನ್ಹೇಲರ್ ಅನ್ನು ಖರೀದಿಸುವುದನ್ನು ಪರಿಗಣಿಸಿ

 • ರೋಗಿಯ ಮಾಹಿತಿ ಕರಪತ್ರದಲ್ಲಿ ನಮೂದಿಸಿರುವ ಶುದ್ಧೀಕರಣ ಮತ್ತು ತೊಳೆಯುವ ಸೂಚನೆಗಳನ್ನು ಅನುಸರಿಸಿ

 • ಪ್ರಯಾಣ ಮಾಡುವಾಗ ನಿಮ್ಮ ಇನ್ಹೇಲರ್ ಅನ್ನು ಅದರ ಮೂಲ ಪ್ಯಾಕೇಜಿಂಗ್ನಲ್ಲಿ ಮತ್ತು ನಿಮ್ಮ ವೈದ್ಯರ ಪ್ರಿಸ್ಕ್ರಿಪ್ಷನ್ ಅನ್ನು ಒಯ್ಯಿರಿ

 • ನಿಮ್ಮ ವೈದ್ಯರ ಜತೆ ಮಾತನಾಡಿ ಮತ್ತು ಇನ್ಹೇಲರ್ಗಳ ಕುರಿತು ನೀವು ಹೊಂದಿರಬಹುದಾದ ಯಾವುದೇ ಸಂದೇಹಗಳನ್ನು ಸ್ಪಷ್ಟಪಡಿಸಿಕೊಳ್ಳಿ.

 

ಮಾಡಬೇಡಿ-

 • ನಿಮ್ಮ ಇನ್ಹೇಲರ್ನೊಳಗೆ ಶ್ವಾಸ ಬಿಡಬೇಡಿ.

 • ಡೋಸ್ ಕೌಂಟರುಗಳ ಸಂದರ್ಭದಲ್ಲಿ, ಡೋಸ್ ಕೌಂಟರಿನಲ್ಲಿರುವ ಸಂಖ್ಯೆಗಳೊಂದಿಗೆ ಹಸ್ತಕ್ಷೇಪ ಮಾಡಬೇಡಿ

 • ವಾಯಿದೆ ದಿನದ ನಂತರ ಇನ್ಹೇಲರ್ ಅನ್ನು ಳಸಬೇಡಿ

 • ಶಿಫಾರಿತ ಡೋಸ್ ಅನ್ನು ಮೀರಬೇಡಿ.