ಇನ್ಹೇಲರ್

ಇನ್ಹೇಲರ್: ಮಿಥ್ಯಾ ಕಲ್ಪನೆಗಳು ಮತ್ತು ವಾಸ್ತವ ಸಂಗತಿಗಳು

ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅತ್ಯಂತ ಪರಿಣಾಮಕಾರಿ ವಿಧಾನವೆಂದು ವಿಶ್ವಾದ್ಯಂತ ಬಹುತೇಕ ಜನರು ಇನ್ಹೇಲರ್ಗಳನ್ನು ಒಪ್ಪಿಕೊಂಡಿದ್ದಾರೆಯಾದರೂ, ಸಾಧನಗಳ ಬಗ್ಗೆ ಇನ್ನೂ ಅನೇಕ ಮಿಥ್ಯಾಕಲ್ಪನೆಗಳಿವೆ. ಮಿಥ್ಯಾಕಲ್ಪನೆಗಳ ಕಾರಣದಿಂದಾಗಿ ಇನ್ಹಲೇಷನ್ ಚಿಕಿತ್ಸೆಯು ಅವರಿಗೆ ಅತ್ಯುತ್ತಮವೆಂದು ಹೇಳಿದಾಗ ಕೆಲವು ಜನರು ಸಾಮಾನ್ಯವಾಗಿ ಸ್ವಲ್ಪ ಚಿಂತಿತರಾಗುತ್ತಾರೆ. ಆದರೆ, ಇನ್ಹೇಲರ್ಗಳನ್ನು ಬಳಸುವುದು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿರುತ್ತದೆ, ಹಾಗಾಗಿ ನೀವು ಯಾವುದೇ ಚಿಂತೆಯಿಲ್ಲದೆ ಅವುಗಳನ್ನು ಬಳಸುವುದನ್ನು ಮುಂದುವರೆಸಬಹುದು.

ಇವುಗಳು ಇನ್ಹೇಲರ್ಗಳ ಬಗ್ಗೆ ಜನರಲ್ಲಿರುವ ಕೆಲವು ಸಾಮಾನ್ಯ ಮಿಥ್ಯಾಕಲ್ಪನೆಗಳು:

ಮಿಥ್ಯಾಕಲ್ಪನೆ #1- ಇನ್ಹೇಲರ್ಗಳು ಚಟವನ್ನು ಉಂಟುಮಾಡುತ್ತವೆ.

ಸಾಮಾನ್ಯ ನಂಬಿಕೆ ಹೊರತಾಗಿಯೂ, ನಿಯತವಾಗಿ ಇನ್ಹೇಲರ್ಗಳನ್ನು ಬಳಸುವುದರಿಂದ ಅದು ನಿಮಗೆ ಒಂದು ಚಟವಾಗಿ ಬಿಡುತ್ತದೆ ಎಂದರ್ಥವಲ್ಲ. ಇನ್ಹೇಲರ್ಗಳಲ್ಲಿ ಬಳಸುವ ಔಷಧವು ಚಟವನ್ನು ಉಂಟುಮಾಡುವುದಿಲ್ಲ. ಮುಂಚಿತವಾಗಿ ಬಳಸುವುದನ್ನು ನಿಲ್ಲಿಸುವುದು ಲಕ್ಷಣಗಳು ಮತ್ತೆ ಕಾಣಿಸಿಕೊಳ್ಳುವಂತೆ ಮಾಡಬಹುದು. ಸರಳವಾಗಿ ಹೇಳುವುದಾದರೆ, ಇನ್ಹೇಲರ್ಗಳು ಅಸ್ತಮಾ ಮತ್ತು ಸಿಒಪಿಡಿಗಳಂತಹ ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಒಂದು ಅನಿವಾರ್ಯತೆಯಾಗಿವೆ, ಮತ್ತು ಚಟವನ್ನು ಉಂಟುಮಾಡುವುದಿಲ್ಲ. ನಿಮ್ಮ ವೈದ್ಯರು ಸೂಚಿಸಿದ ಸಮಯದವರೆಗೆ ಇನ್ಹೇಲರ್ಗಳನ್ನು ಬಳಸಬೇಕು.

ಮಿಥ್ಯಾಕಲ್ಪನೆ #2- ಇನ್ಹೇಲರ್ಗಳ ಬಳಕೆಯು ಮಕ್ಕಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಇದು ಇನ್ಹೇಲರ್ಗಳ ಬಗ್ಗೆ ಇರುವ ಒಂದು ಅತ್ಯಂತ ಸಾಮಾನ್ಯ ತಪ್ಪಭಿಪ್ರಾಯವಾಗಿದೆ. ಇನ್ಹೇಲರ್ಗಳಲ್ಲಿ ಅಡ್ಡ ಪರಿಣಾಮಗಳು ಇಲ್ಲ, ಏಕೆಂದರೆ ಔಷಧವನ್ನು ತೀರಾ ಅಲ್ಪ ಡೋಸ್‌ಗಳಲ್ಲಿ ಶ್ವಾಸಕೋಶಗಳಿಗೆ ತಲುಪಿಸಲಾಗುತ್ತದೆ. ವಾಸ್ತವವಾಗಿ, ನಿಯತವಾಗಿ ಮತ್ತು ಶಿಫಾರಿಸಲಾದ ಡೋಸ್‌ಗಳಲ್ಲಿ, ಸೇವಿಸಿದಾಗ, ಇನ್ಹೇಲರ್ಗಳು ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಸುರಕ್ಷಿತ ರೀತಿಯ ಔಷಧವಾಗಿವೆ. ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ತಮ್ಮ ಉಸಿರಾಟದ ಸಮಸ್ಯೆಗಳ ಚಿಕಿತ್ಸೆಗೆ ನಿಯತವಾಗಿ ಇನ್ಹೇಲರ್ಗಳನ್ನು ಬಳಸಿದ ಮಕ್ಕಳು ಸಾಮಾನ್ಯ ವಯಸ್ಕ ಎತ್ತರಕ್ಕೆ ಬೆಳೆದಿದ್ದಾರೆ.

ಮಿಥ್ಯಾಕಲ್ಪನೆ #3- ಉಚ್ಛ್ವಸಿಸಲಾಗುವ ಸ್ಟೆರಾಯಿಡ್ಗಳು ಹಾನಿಕಾರಕ

ನೀವು ಇನ್ಹೇಲರ್ ಅನ್ನು ಬಳಸಿದಾಗ, ಔಷಧವು ಸಮಸ್ಯೆಯ ಸ್ಥಳಕ್ಕೆ - ಶ್ವಾಸಕೋಶಗಳು - ನೇರವಾಗಿ ತಲುಪುತ್ತದೆ. ಆದ್ದರಿಂದ, ಇನ್ಹೇಲರ್ಮೂಲಕ ಶ್ವಾಸಕೋಶಗಳಿಗೆ ತಲುಪಿಸಲಾಗುವ ಔಷಧದ ಪ್ರಮಾಣವು ತೀರಾ ಕಡಿಮೆ. ಅಂತಹ ಅಲ್ಪ ಪ್ರಮಾಣಗಳು ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ. ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಸೇರಿದಂತೆ, ಪ್ರತಿಯೊಬ್ಬರೂ ಇನ್ಹೇಲರ್ಗಳನ್ನು ಸುರಕ್ಷಿತವಾಗಿ ತೆಗೆದುಕೊಳ್ಳಬಹುದು. ಇದಲ್ಲದೆ, ಇನ್ಹೇಲರ್ ಔಷಧಗಳಲ್ಲಿ ಬಳಸುವ ಸ್ಟೆರಾಯ್ಡ್ ವಿಧವು ಕ್ರೀಡಾಪಟುಗಳು ಮತ್ತು ಬಾಡಿ ಬಿಲ್ಡರ್ಗಳು ತಮ್ಮಕಾರ್ಯಕ್ಷಮತೆಯನ್ನು ಉತ್ತಮಗೊಳಿಸುವ ಸಲುವಾಗಿ ಬಳಸುವ ಹಾಗೆ ಅಲ್ಲ, ಹೀಗಾಗಿ, ಇನ್ಹೇಲರ್ ಕಾರಣದಿಂದಾಗಿ ನೀವು ಯಾವುದೇ ರೀತಿಯ ಅಡ್ಡ ಪರಿಣಾಮವನ್ನು ಹೊಂದುವ ಸಾಧ್ಯತೆಗಳು ಬಹುತೇಕ ಶೂನ್ಯವಾಗಿರುತ್ತವೆ. ವಾಸ್ತವವಾಗಿ, ನಿಮ್ಮ ಇನ್ಹೇಲರ್ ಅನ್ನು, ತೆಗೆದುಕೊಳ್ಳದೆಯೇ ಇರುವುದಕ್ಕಿಂತ, ನಿಯತವಾಗಿ ತೆಗೆದುಕೊಳ್ಳುವುದರಿಂದ ನೀವು ಯಾವುದೇ ಹಾನಿಗೆ ಒಳಗಾಗುವ ಸಾಧ್ಯತೆಯು ಅತ್ಯಂತ ಕಡಿಮೆಯಾಗಿರುತ್ತದೆ.

ಮಿಥ್ಯಾಕಲ್ಪನೆ #4- ಪುರಾಣ # 4- ಇನ್ಹೇಲರ್ಗಳು ಕೊನೆಯ ಉಪಾಯವಾಗಿವೆ

ಅಸ್ತಮಾ ಮತ್ತು ಸಿಒಪಿಡಿಗಳಂತಹ ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇನ್ಹೇಲರ್ಗಳು ಕೊನೆಯದಾಗಿರದೆ ಪ್ರಥಮ ವಿಧಾನದ ಔಷಧವಾಗಿವೆ. ಜಗತ್ತಿನಾದ್ಯಂತ, ಇನ್ಹೇಲರ್ಗಳು ಹೆಚ್ಚಿನ ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಅತ್ಯಂತ ಪರಿಣಾಮಕಾರಿ, ಸುರಕ್ಷಿತ ಮತ್ತು ಅನುಕೂಲಕರ ವಿಧಾನವೆಂದು ಪರಿಗಣಿಸಲ್ಪಟ್ಟಿವೆ. ದೀರ್ಘಕಾಲೀನ ಮತ್ತು ತಕ್ಷಣದ ಪರಿಹಾರವನ್ನು ಒದಗಿಸಲು, ಶ್ವಾಸಕೋಶಗಳು ಮತ್ತು ವಾಯುಮಾರ್ಗಗಳಂತಹ ಸಮಸ್ಯೆ ಪ್ರದೇಶಗಳನ್ನು ಔಷಧಗಳು ನೇರವಾಗಿ ತಲುಪಲು ಇನ್ಹೇಲರ್ಗಳು ಸಾಧ್ಯವಾಗಿಸುತ್ತವೆ ಅಸ್ತಮಾ ಮತ್ತು ಸಿಒಪಿಡಿಯಂತಹ ನಿಮ್ಮ ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇನ್ಹಲೇಷನ್ ಥೆರಪಿಯು ಅತ್ಯಂತ ಪರಿಣಾಮಕಾರಿಯಾದ ವಿಧಾನವಾಗಿದೆ, ಹಾಗಾಗಿ ನೀವು ಪ್ರೀತಿಸುವ ಮತ್ತು ಆನಂದಿಸುವ ಎಲ್ಲವನ್ನೂ ಮಾಡುವುದನ್ನು ಮುಂದುವರಿಸಬಹುದು, ಮತ್ತು ಯಾವುದೇ ಚಿಂತೆಯಿಲ್ಲದೆ ಸಾಮಾನ್ಯ ಸಕ್ರಿಯ ಜೀವನವನ್ನು ನಡೆಸಬಹುದು.

Please Select Your Preferred Language