ಸ್ಫೂರ್ತಿ

ಜೀವನ 2.0

ಹರೆಯದವರಾಗಿರುವುದರ ಬಗ್ಗೆ ಇಲ್ಲಿರುವ ಒಂದು ಸಂಗತಿಯೆಂದರೆ- ಇದು ವಿನೋದ ಮತ್ತು ವಿಭಿನ್ನ ಅನುಭವಗಳನ್ನು ಹೊಂದಿರುವ ಕುರಿತಾಗಿದೆ. 20 ಅಥವಾ 25 ವರ್ಷಗಳ ನಂತರ ನಮಗೆ ಏನಾಗಬಹುದು ಎಂದು ನಾವು ಯೋಚಿಸಲು ಪ್ರಯತ್ನಿಸುವುದಿಲ್ಲ. ಆವಾಗಲೇ ನನ್ನ ಸಮಸ್ಯೆಯು ಪ್ರಾರಂಭವಾಗಿದ್ದು. ನಾನು ಯುವಕನಾಗಿದ್ದಾಗ, ಧೂಮಪಾನವನ್ನು ಆರಂಭಿಸಿದೆ, ಅದು ನನ್ನ ಜೀವನದಲ್ಲಿ ನಂತರ ಎಷ್ಟು ಕೆಟ್ಟ ಪರಿಣಾಮವನ್ನು ಬೀರಬಹುದೆಂದು ಅರ್ಥಮಾಡಿಕೊಳ್ಳದೆ ಅಥವಾ ಮನಗಾಣದೆ. ನಾನು ಅನೇಕ ಬಾರಿ ಧೂಮಪಾನವನ್ನು ತೊರೆಯಲು ಪ್ರಯತ್ನಿಸಿದೆ, ಆದರೆ ಯಾವಾಗಲೂ ’ನಾನು ಧೂಮಪಾನ ಅಭ್ಯಾಸ ಹೊಂದಿರುವ ಒಬ್ಬ ಸ್ವತಂತ್ರ ಯುವಕ. ಅತ್ಯಂತ ಕೆಟ್ಟದೆಂದರೆ ಏನಾಗುತ್ತದೆ?’ ಎಂದು ನನ್ನನ್ನೇ ನಾನು ಸಮರ್ಥಿಸಿಕೊಳ್ಳುತ್ತಿದ್ದೆ.

 

ಉತ್ತರವು ಕೇವಲ ನಾಲ್ಕು ವರ್ಣಮಾಲೆಗಳು -ಸಿಒಪಿಡಿ 

 

ಆರಂಭದಲ್ಲಿ, ನಾನು ನಿರ್ಲಕ್ಷಿಸುವಂತಹ, ಸೌಮ್ಯ ಏದುಸಿರು ಅಥವಾ ಮರುಕಳಿಸುವ ಕೆಮ್ಮಿನಂಥಹ, ಲಕ್ಷಣಗಳು ಸೌಮ್ಯವಾಗಿದ್ದುವು. ಮೊದಮೊದಲಿಗೆ, ಅದು ಕೇವಲ ಮುದಿವಯಸ್ಸಿನ ಚಿಹ್ನೆಗಳು ಎಂದು ನಾನು ಭಾವಿಸಿದೆ ಮತ್ತು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ.  ಆದರೆ ಸಮಯದೊಂದಿಗೆ, ಅದು ಕೆಟ್ಟದಾಗುತ್ತಲೇ ಹೋಯಿತು. ಕಿರಾಣ ಅಂಗಡಿಗೆ ಖರೀದಿಗೆ ಹೋಗುವುದು ಅಥವಾ ವಾಷ್‌ರೂಮ್‌ಗೆ ಹೋಗುವುದು ಮುಂತಾದ ಸರಿಯಾಗಿ ಸಾಮಾನ್ಯವಾದ ಕಾರ್ಯಗಳನ್ನು ಮಾಡುವಾಗ ನನಗೆ ಏದುಸಿರಾಗುತ್ತಿತ್ತು. ಪರಿಸ್ಥಿತಿಯು ಎಷ್ಟು ಕೆಟ್ಟದಾಗಿತ್ತೆಂದರೆ, ನಾನು ಒಬ್ಬನೇ ವಾಷ್‌ರೂಮ್‌ ಉಪಯೋಗಿಸಲು ಹೆದರುತ್ತಿದ್ದೆ ಮತ್ತು ಮುಂದಿನ ವಿಷಯೆ ನಾನು ತಿಳಿದದ್ದು, ನಾನು ಹಾಸಿಗೆ ಹಿಡಿದದ್ದು.

 

ಕೆಲಸ ಮಾಡದ ವಿವಿಧ ಪರಿಹಾರಕಗಳು ಮತ್ತು 'ಚಿಕಿತ್ಸೆಗಳನ್ನು' ಪ್ರಯತ್ನಿಸಿದ ನಂತರ, ನನ್ನ ಸ್ಥಿತಿಯ ಬಗ್ಗೆ ಏನನ್ನಾದರೂ ಮಾಡಲೇಬೇಕು ಎಂಬುದು ನನಗೆ ಅರಿವಾಗಿತ್ತು. ನಾನು ವೈದ್ಯರೊಡನೆ ಸಮಾಲೋಚನೆ ಮಾಡುವ ತನಕ ನನಗೆ ಸಿಒಪಿಡಿ ಇದೆ ಎಂದು ನನಗೆ ಗೊತ್ತಿರಲಿಲ್ಲ. ವೈದ್ಯರು ನನಗೆ ಮೊದಲ ಬಾರಿಗೆ ಅದರ ಬಗ್ಗೆ ಹೇಳಿದಾಗ, ಅವರು ಸುಳ್ಳು ಹೇಳುತ್ತಿದ್ದಾರೆಂದು ನಾನು ಅಂದುಕೊಂಡೆ. ನಾನು ಹಾಗೆ ಹೇಳಿಗ, ಧೂಮಪಾನವು ನನ್ನ ಶ್ವಾಸಕೋಶಗಳ ಮತ್ತು ವಾಯುಮಾರ್ಗಗಳ ಮೇಲೆ ಹೇಗೆ ಪರಿಣಾಮ ಬೀರಿದೆ, ಮತ್ತು ನನ್ನಲ್ಲಿ ಸಿಒಪಿಡಿಯು ಹೇಗೆ ಬಂದಿತು ಎಂಬುದನ್ನು ಅವರು ವಿವರಿಸಿದರು.

 

ಇದು ನನ್ನ ಜೀವನದ ಅಂತ್ಯವೆಂದು ನನಗೆ ಖಚಿತವಾಗಿತ್ತು. ನಾನು ಸರಿಯಾದ ಚಿಕಿತ್ಸೆಗೆ ಒಳಗಾದರೆ ಮತ್ತು ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡಿದರೆ, ಸಿಒಪಿಡಿಯನ್ನು ನಿರ್ವಹಿಸಬಹುದೆಂದು ವೈದ್ಯರು ಆಗ ನನಗೆ ಹೇಳಿದರು. ಇಂದು, ನಾನು ನನಗೆ ಯಾವಾಗಲೂ ಬೇಕಾಗಿದ್ದ ಹಾಗೆ, ಸ್ವತಂತ್ರವಾಗಿ ಮತ್ತು ಸಂತೋಷದಿಂದ, ನಾನು ಜೀವನ ಮಾಡುತ್ತಿದ್ದೇನೆ. ನಾನು ಧೂಮಪಾನವನ್ನು ತೊರೆದಿದ್ದರಿಂದ ಮತ್ತು ಸರಿಯಾದ ಚಿಕಿತ್ಸೆಗೆ ಒಳಗಾಗುತ್ತಿರುವುದರಿಂದ, ನನ್ನ ಸಿಒಪಿಡಿಯನ್ನು ನಿಯಂತ್ರಿಸಲು ನಾನು ಸರಿಯಾದ ಮಾರ್ಗದಲ್ಲಿದ್ದೇನೆ ಎಂದು ನನ್ನ ವೈದ್ಯರು ಹೇಳುತ್ತಾರೆ.

 

ನಾನು ಈ ಮುಂದೆ ಒಂಟಿಯಾಗಿ ಎಲ್ಲಿಯಾದರೂ ಹೋಗಲು ಅಥವಾ ಏನಾದರೂ ತಿನ್ನಲು ಹೆದರುವುದಿಲ್ಲ. ನನ್ನಂತೆಯೇ, ಸಿಒಪಿಡಿ ಹೊಂದಿರುವ ಜನರು ಅದು ಪ್ರಪಂಚದ ಅಂತ್ಯವಲ್ಲವೆಂದು, ಮತ್ತು ಅದನ್ನು ಸರಿಯಾದ ರೋಗನಿದಾನ, ಚಿಕಿತ್ಸೆ ಮತ್ತು ಜೀವನಶೈಲಿಯ ಬದಲಾವಣೆಗಳೊಂದಿಗೆ, ನೀವು ಆರೋಗ್ಯಕರ ಮತ್ತು ಸಕ್ರಿಯ ಜೀವನವನ್ನು ನಡೆಸಬಹುದು ಎಂದು ನಾನು ಭಾವಿಸುತ್ತೇನೆ.

Please Select Your Preferred Language