ಸ್ಫೂರ್ತಿ

ದೇವರು ನಿನ್ನನ್ನು ಕಾಪಾಡಲಿ!

ಇದೆಲ್ಲಾ ಒಂದು ದಿನ ಒಂದು ಸೀನುವುದರೊಂದಿಗೆ ಪ್ರಾರಂಭವಾಯಿತು. ಸಹಜವಾಗಿ, ಒಂದು ಸೀನು ನಿಮ್ಮ ಜೀವನವನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ಸತತವಾಗಿ 15-20 ನಿಮಿಷಗಳ ಕಾಲ ಸೀನುವಿಕೆಯು ಅದನ್ನು ಸಾಧ್ಯವಾಗಿಸಬಹುದು  ಮತ್ತು ನೀವು ಸುಸ್ತಾಗುವವರೆಗೂ ಅವು ಮುಂದುವರೆದರೆ, ನಿಮ್ಮ ಜೀವನವು ಮತ್ತೆ ಎಂದಿನಂತೆ ಇರುವುದಿಲ್ಲ.

ಆರಂಭದಲ್ಲಿ, ಇದು ಕೇವಲ ಸಾಮಾನ್ಯ ಶೀತ ಎಂದು ನಾನು ಅಂದುಕೊಂಡೆನು. ಆದರೆ ನಂತರ, ಸೀನಿನ ದಾಳಿಗಳು ದಿನಪೂರ್ತಿ ಮುಂದುವರೆಯುತ್ತಿದ್ದುವು. ಮೊದಲಿಗೆ, ನಾನು ಒಂದು ಸಂಭಾಷಣೆಯ ವೇಳೆಯಲ್ಲಿ ಪ್ರತಿ ಬಾರಿ ಸೀನಿದಾಗ, ನನ್ನ ಸ್ನೇಹಿತರು ಮತ್ತು ಕುಟುಂಬದವರು ನಾನು ಒಬ್ಬ ದುರಾದೃಷ್ದದ ದೂತ ಎಂದು ಹಾಸ್ಯ ಮಾಡುತ್ತಿದ್ದರು. ಸ್ವಲ್ಪ ಸಮಯದವರೆಗೆ ನಾನು ಅದಕ್ಕೆ ನಗುತ್ತಿದ್ದೆ.

ಆದರೆ ನಂತರ, ಇದು ತಮಾಷೆಯಾಗಿ ಕಾಣಲಿಲ್ಲ. ಮೂಢನಂಬಿಕೆಯು ತೀರಾ ಆಳವಾಗಿತ್ತು ಮತ್ತು ನನ್ನ ಸೀನುಗಳು ತುಂಬಾ ಪದೇಪದೇ ಆಗುತ್ತಿದ್ದವು. ಅಪಶಕುನ ಎಂಬಂತಹ ಪದಗಳು, ಪ್ರತಿ ಬಾರಿ ನನ್ನ ಕಿವಿಗಳನ್ನು ಇರಿಯುತ್ತಿದ್ದುವು. ಎಡೆಬಿಡದ ಸೀನಿಂದ ಆಗುವುದಕ್ಕಿಂತ ಹೆಚ್ಚಾಗಿ ನನ್ನ ಎದೆಯನ್ನು ನೋಯಿಸಿದುವು.

ಸೀನುವುದು ಕೂಡ ಒಂದು ಕಾಕಿಲೆಯ ಭಾಗವೆಂದು ನಾನು ಎಂದೂ ಭಾವಿಸಿರಲಿಲ್ಲ. ನನ್ನ ಮೂಗು ಸದಾಕಾಲ ಸುರಿಯುತ್ತಿತ್ತಿ ಮತ್ತು ಕಣ್ಣುಗಳು ನೀರೂರುತ್ತಿದ್ದುವು. ಕೊನೆಗೆ, ನಾನು ಒಂದು ವೈದ್ಯರಲ್ಲಿಗೆ ಹೋದೆ  ಮತ್ತು ಅವರು  ನನ್ನ ಸ್ಥಿತಿಯನ್ನು ಅಲರ್ಜಿಕ್ ರೈನೈಟಿಸ್ ಎಂದು ಕರೆಯಲ್ಪಡುತ್ತದೆ ಎಂದು ನನಗೆ ವಿವರಿಸಿದರು. ಇದು ನನ್ನನ್ನು ಅತ್ಯಂತ ಭಯಭೀತಗೊಳಿಸಿತು. ನಾನು ಚಿಕಿತ್ಸೆ ಮತ್ತು ಔಷಧೋಪಚಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ನನ್ನ ಜೀವನವು ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳಲು ಫ್ರಾರಂಭಿಸಿತು. ಮತ್ತು ಈಗ ನನ್ನ ಅಲರ್ಜಿಕ್ ರೈನೈಟಿಸ್ ಸಂಪೂರ್ಣವಾಗಿ ಹತೋಟಿಯಲ್ಲಿದೆ.

ನನಗೆ ಎಂದೂ ಅದೃಷ್ಟದಲ್ಲಿ ನಂಬಿಕೆ ಇರಲಿಲ್ಲ, ಅದರಲ್ಲೂ ವಿಶೇಷವಾಗಿ ಒಂದು ಅಪಶಕುನವಾಗಿಆದರೆ ನನ್ನ ಸ್ಥಿತಿಗೆ ಸರಿಯಾದ ರೋಗನಿದಾನವನ್ನು ಮಾಡಲು ನನ್ನ ವೈದ್ಯರು ನನಗೆ ಸಹಾಯ ಮಾಡಿದ್ದು ಇದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ನನ್ನಂತಹ ಸ್ಥಿತಿಯನ್ನು ಹೊಂದಿರುವ ಇತರರು ಸಹ ಹೀಗೆಯೇ ಮಾಡುವರೆಂದು ನಾನು ಆಶಿಸುತ್ತೇನೆ. ಮತ್ತು ನನ್ನಂತೆಯೇ, ಅವರು ಸಹ ಸಾಮಾನ್ಯ ಜೀವನಕ್ಕೆ ಹತ್ತಿರವಾದ ಒಂದು ಜೀವನವನ್ನು ನಡೆಸಬಹುದು; ಹಾಗಾಗಿ ಅವರ ಸೀನುಗಳನ್ನು ಮುಗುಳ್ನಗೆಗಳಿಂದ ಬದಲಾಯಿಸಬಹುದು.

Please Select Your Preferred Language