ಸಿಒಪಿಡಿ

ನಿಮಗೆ ಸಿಒಪಿಡಿ ಹೇಗೆ ಉಂಟಾಗುತ್ತದೆ? (ಕಾರಣಗಳು)

ಅನೇಕ ಇತರ ಉಸಿರಾಟದ ಸಮಸ್ಯೆಗಳಂತಲ್ಲದೆ, ನೀವು ಸಿಒಪಿಡಿಯೊಂದಿಗೆ ಜನಿಸುವುದಿಲ್ಲ. ಆದ್ದರಿಂದ, ಅದರ ವಿರುದ್ಧ ನಿಮ್ಮನ್ನು ರಕ್ಷಿಸಲು ನಿಮಗೆ ಸಂಪೂರ್ಣವಾಗಿ ಸಾಧ್ಯವಿದೆ. ಇದು ಏನಾದರೊಂದು ಆಗಿರಬಹುದು ಅದರಿಂದ ನೀವು ಪೀಡಿತರಾಗುತ್ತೀರಿ ಏಕೆಂದರೆ ನೀವು ದೀರ್ಘ ಸಮಯದವರೆಗೆ ಕೆಲವು ಅಂಶಗಳಿಗೆ ಒಡ್ಡಿಕೊಳ್ಳುವುದರಿಂದ ಸಿಒಪಿಡಿ ಉಂಟಾಗುತ್ತದೆ. 

 

ಸಿಒಪಿಡಿ ಹೊಂದಿರುವ ಬಹುತೇಕ ಜನರು, ಕನಿಷ್ಠ ಪಕ್ಷ ಧೂಮಪಾನದ ಸ್ವಲ್ಪ ಇತಿಹಾಸವನ್ನು ಹೊಂದಿರುತ್ತಾರೆ. ಧೂಮಪಾನವು ಸಿಒಪಿಡಿಯ ಅತ್ಯಂತ ಸಾಮಾನ್ಯ ಕಾರಣವಾಗಿದೆಯಾದರೂ, ಹಾನಿಕಾರಕ ಕಣಗಳು / ಇತರ ಪ್ರಕಾರಗಳ ಹೊಗೆ ಮತ್ತು ಧೂಮಗಳ ಉದ್ರೇಕಕಾರಿಗಳಿಗೆ ನಿರಂತರ ಒಡ್ಡಿಕೊಳ್ಳುವಿಕೆಯೂ ಕೂಡ ಸಿಒಪಿಡಿ ಉಂಟಾಗುವ ಅಪಾಯವನ್ನು ಹೆಚ್ಚಿಸಬಹುದು. ರಾಸಾಯನಿಕ ಅಥವಾ ಅಡುಗೆ ಹೊಗೆಗಳು, ಧೂಳು, ಒಳಾಂಗಣ ಅಥವಾ ಹೊರಾಂಗಣ ವಾಯು ಮಾಲಿನ್ಯ, ಮತ್ತು ಕಳಪೆ ಗಾಳಿಬೆಳಕು ಸಂಚಾರವಿರುವ ಪರಿಸರಗಳಲ್ಲಿನ ಪರೋಕ್ಷ ಹೊಗೆ ಸಿಒಪಿಡಿಯ ಇತರ ಕೆಲವು ಕಾರಣಗಳಾಗಿವೆ.

ಕಾಲಾನಂತರದಲ್ಲಿ, ತಂಬಾಕು ಹೊಗೆ ಅಥವಾ ಇತರ ಹಾನಿಕಾರಕ ಕಣಗಳನ್ನು ಉಸಿರಾಡುವುದು ವಾಯುಮಾರ್ಗಗಳನ್ನು ಕೆರಳಿಸುತ್ತದೆ ಮತ್ತು ಶ್ವಾಸಕೋಶದ ಹಿಗ್ಗುವ ತಂತುರಚನೆಗಳ ಮೇಲೆ ಪರಿಣಾಮ ಬೀರುತ್ತವೆ. 

ಸಿಒಪಿಡಿಯು 40 ಕ್ಕಿಂತ ಹೆಚ್ಚು ವಯಸ್ಸಿನ ಜನರಲ್ಲಿ ಅತ್ಯಂತ ಸಾಮಾನ್ಯವಾಗಿರುತ್ತದೆ, ಏಕೆಂದರೆ ಇದು ಸಾಮಾನ್ಯವಾಗಿ ಸಿಒಪಿಡಿಯ ಲಕ್ಷಣಗಳನ್ನು ಉಂಟುಮಾಡುವ ಶ್ವಾಸಕೋಶದ ಹಾನಿಗಾಗಿ ವರ್ಷಗಳನ್ನೇ ತೆಗೆದುಕೊಳ್ಳುತ್ತದೆ.

Please Select Your Preferred Language