ಸ್ಫೂರ್ತಿ

ಪ್ರಸಿದ್ಧಿಯಾಗುವಿಕೆಯ ಕನಸುಗಳು

ಜಿತೇಶ್ ಯಾವಾಗಲೂ ನೃತ್ಯದಿಂದ ಆಕರ್ಷಿತರಾಗಿದ್ದನು. ಅವನು ಸ್ವಾಭಾವಿಕವಾಗಿಯೇ ಸಂಗೀತಕ್ಕೆ ಪ್ರತಿಸ್ಪಂದಿಸುತ್ತಿದ್ದನು ಮತ್ತು ಒಬ್ಬ ವೃತ್ತಿಪರನಂತೆ ನೃತ್ಯ ಮಾಡುತ್ತಿದ್ದನು. ಹಾಗಾಗಿ, ಅವನು ಒಬ್ಬ ವೃತ್ತಿಪರ ನರ್ತಕನಾಗಿ ತಾನು ಬೆಳೆಯಬೇಕೆಂದು ಹೇಳಿದಾಗ, ನಮಗೆಲ್ಲಾ ಬಹಳ ಖುಷಿಯಾಯಿತು. ಅವನ್ನು ತನ್ನ ಕನಸುಗಳನ್ನು ಅನುಸರಿಸಬೇಕೆಂದೊ ಮತ್ತು ಉನ್ನತ ಮಟ್ಟಗಳನ್ನು ತಲುಪಬೇಕೆಂದು ನಾವು ಬಯಸುತ್ತಿದ್ದೆವು.

 

ಆದರೆ ಒಂದು ದಿನ ಅವನು ತರಗತಿಗೆ ಹೋಗಲು ನಿರಾಕರಿಸಿದಾಗ ಏನೋ ಸ್ವಲ್ಪ ಸರಿಯಿಲ್ಲ ಎಂದು ನಮಗೆ ಅನಿಸಿತು. ಅವನು ಏಕೆ ತರಗತಿಯನ್ನು ತಪ್ಪಿಸಿಕೊಳ್ಳಬಯಸುವನೆಂದು ನಮಗೆ ಅರ್ಥವಾಗಲಿಲ್ಲ, ಮತ್ತು ಅವನ ಜೊತೆ ಮಾತನಾಡಲು ನಾವು ಪ್ರಯತ್ನಿಸಿದೆವು. ಆದರೆ ಅವನು ನಮಗೆ ಒಂದು ಕಾರಣವನ್ನು ನೀಡುತ್ತಿರಲಿಲ್ಲ, ಮತ್ತು ಇನ್ನು ಮುಂದೆ ಡ್ಯಾನ್ಸ್ ಮಡುವುದು ತನಗೆ ಇಷ್ಟವಿಲ್ಲ ಎಂದಷ್ಟೇ ಹೇಳುತ್ತಿದ್ದನು. ಕೊನೆಗೆ, ಬಹಳ ಪುಸಲಾಯಿಸಿದ ನಂತರ, ಅವನು ಕಾರಣವನ್ನು ಹೇಳಿದನು. ಅವನಿಗೆ ಏಕೆ ತರಗತಿಗೆ ಹೋಗಲು ಇಷ್ಟವಿರಲಿಲ್ಲ ಎಂದರೆ ಡ್ಯಾನ್ಸ್ ಅಭ್ಯಾಸ ಮಾಡುವಾಗ ಮಧ್ಯೆ ಅವನಿಗೆ ಉಸಿರಾಡಲು ಕಷ್ಟವಾಗುತ್ತಿತ್ತು.

 

ಜಿತೇಶನಿಗೆ ತನ್ನ ಕನಸನ್ನು ಸಾಧಿಸುವ ಯತ್ನಕ್ಕೆ ಸಹಾಯಮಾಡಲೇಬೇಕೆಂಬ ದೃಢ ನಿಶ್ಚಯದೊಂದಿಗೆ, ನಾವು ವೈದ್ಯರ ಬಳಿ ಹೋದೆವು. ಆಗಲೇ ವೈದ್ಯರು ನಮ್ಮ ಕನಸುಗಳೆಲ್ಲ ಕುಸಿದುಬೀಳುವಂತಹ ಸಮಾಚಾರವನ್ನು ನಮಗೆ ಕೊಟ್ಟಿದ್ದು - ಜಿತೇಶನಿಗೆ ಅಸ್ತಮಾ ಇದೆ.

 

ಮೊದಲಿಗೆ, ನಮಗೆ ಅದನ್ನು ನಂಬುವುದಕ್ಕೆ ಸಾಧ್ಯವಾಗಲಿಲ್ಲ. ಇದು ಹೇಗೆ ಸಾಧ್ಯ? ಅವನೇನು ಮಾಡಿದ? ಅವನಿಗೆ ಏಕೆ? ಅನೇಕ ಜನರು ಅನೇಕ ಆಯ್ಕೆಗಳನ್ನು ನೀಡಿದರು. ವಿವಿಧ ಚಿಕಿತ್ಸೆಗಳು. ಡ್ಯಾನ್ಸ್ ಮಾಡುವುದಿರಲಿ, ಅವನು ಎಂದಿನಂತೆ ನಡೆಯುವುದಕ್ಕೆ ಅಥವಾ ಓಡುವುದಕ್ಕೆ ಸಾಧ್ಯವಾಗುವುದೇ ಎಂದು ನಮಗೆ ಚಿಂತೆಯಾಗಿತ್ತು.

 

ಆದರೆ, ಅಂತಿಮವಾಗಿ, ಇನ್ಹೇಲರ್‌ಗಳು ನಮ್ಮ ಸಹಾಯಕ್ಕೆ ಬಂದುವು. ಜಿತೇಶನು ಇನ್ಹಲೇಷನ್ ಚಿಕಿತ್ಸೆಯನ್ನು ಆರಂಭಿಸಿದನು ಮತ್ತು ಅಸ್ತಮಾವನ್ನು ಪ್ರಚೋದಿಸುವ ಸಂಗತಿಗಳಿಂದ ದೂರವಿರಲು ಬಹಳ ಎಚ್ಚರಿಕೆಯಿಂದಿದ್ದನು. ಇನ್ಹೇಲರ್‌ಗಳು, ನಿಯತ ಭೇಟಿಗಳು ಮತ್ತು ವೈದ್ಯರಿಂದ ತಪಾಸಣೆಗಳು ಮತ್ತು ಜಿತೇಶನ ಶ್ರಮಶೀಲ ಪ್ರಯತ್ನಗಳು ಅವನ ಅಸ್ತಮಾವನ್ನು ಕ್ರಮೇಣವಾಗಿ ಹತೋಟಿಯಲ್ಲಿಡಲು ಸಹಾಯ ಮಾಡಿದುವು.

 

ಇಂದು, ಜಿತೇಶನು, ಬಹಳಷ್ಟು ಡ್ಯಾನ್ಸ್ ಮಾಡುವುದು ಸೇರಿ, ತಾನು ಇಷ್ಟಪಡುವುದನ್ನು ಮಾಡುತ್ತಾನೆ. ಅವನಿಗೆ ಒಂದು ಸಮಸ್ಯೆಯು ಇದೆಯೆಂದು ಯಾರಿಗೂ ಕಂಡುಹಿಡಿಯಲು ಸಾಧ್ಯವಿಲ್ಲ. ಅವನು ತನ್ನ ಶಾಲೆಯ ವಾರ್ಷಿಕ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದನು.

 

ಇದು ಜಿತೇಶನು ಅಸ್ತಮಾ ಹೊಂದಿದ್ದಾನೆಂಬುದನ್ನು ನಾವು ಬಹುತೇಕ ಮರೆತುಹೋಗಿರುವಂತಿದೆ.

Please Select Your Preferred Language