ಅಲರ್ಜಿಕ್ ರಿನಿಟಿಸ್

ಲಕ್ಷಣಗಳು

ನೀವು ಒಂದು ಅಲರ್ಜಿನ್‌ನೊಂದಿಗೆ ಸಂಪರ್ಕಕ್ಕೆ ಬಂದಾಗ ಸಾಮಾನ್ಯವಾಗಿ ಅಲರ್ಜಿಕ್ ರಿನಿಟಿಸ್ ಲಕ್ಷಣಗಳು ಸಂಭವಿಸುತ್ತವೆ ಮತ್ತು ಅವುಗಳನ್ನು ಗುರುತಿಸುವುದು ಸಾಕಷ್ಟು ಸುಲಭ. ಕೆಲವು ಆರಂಭಿಕ ಲಕ್ಷಣಗಳು ಇವುಗಳನ್ನು ಒಳಗೊಂಡಿವೆ:

  • ಪುನರಾವರ್ತಿಸುವ ಸೀನುವಿಕೆ, ವಿಶೇಷವಾಗಿ ಬೇಗನೆ ಮುಂಜಾನೆ ವೇಳೆಯಲ್ಲಿ

  • ಸುರಿಯುವ ಮೂಗು ಮತ್ತು ತೆಳುವಾದ, ಸ್ಪಷ್ಟವಾದ ಪೋಸ್ಟ್ನೇಸಲ್ ಡ್ರಿಪ್ಅದು ಗಂಟಲು ವೇದನೆಗೆ ಕಾರಣವಾಗಬಹುದು

  • ನೀರು ಸುರಿಯುವ ಮತ್ತು ತುರಿಕೆಯ ಕಣ್ಣುಗಳು

  • ತುರಿಕೆಯ ಕಿವಿಗಳು, ಮೂಗು ಮತ್ತು ಗಂಟಲು

ನಂತರ ವಿಕಾಸಗೊಳ್ಳಬಹುದಾದ ಲಕ್ಷಣಗಳು ಇವುಗಳನ್ನು ಒಳಗೊಳ್ಳುತ್ತವೆ;

  • ಕಟ್ಟಿಕೊಂಡಿರುವ ಮೂಗು

  • ತಲೆನೋವು

  • ದಣಿವು ಮತ್ತು ಸಿಡುಕುತನ

  • ಮುಚ್ಚಿಕೊಂಡ ಕಿವಿಗಳು

  • ವಾಸನೆಯ ಕಡಿಮೆಯಾದ ಸಂವೇದನೆ

ಕಾಲಕ್ರಮೇಣದಲ್ಲಿ, ಅಲರ್ಜಿನ್‌ಗಳು ನಿಮ್ಮ ಮೇಲೆ ಕಡಿಮೆ ಪರಿಣಾಮ ಬೀರಬಹುದು, ಮತ್ತು ನಿಮ್ಮ ಲಕ್ಷಣಗಳು ಮೊದಲಿಗಿಂತ ಕಡಿಮೆ ತೀವ್ರವಾಗಿರಬಹುದು.

 

 

ಅಲರ್ಜಿಕ್ ರಿನಿಟಿಸ್ ವಿರುದ್ಧ ಸಾಮಾನ್ಯ ನೆಗಡಿ

ಅಲರ್ಜಿಕ್ ರಿನಿಟಿಸ್‌ನ ಲಕ್ಷಣಗಳು ಸಾಮಾನ್ಯ ಶೀತದೊಂದಿಗೆ ಸುಲಭವಾಗಿ ಗೊಂದಲಕ್ಕೀಡಲ್ಪಡಬಹುದು. ಆದಾಗ್ಯೂ, ಲಕ್ಷಣಗಳಲ್ಲಿ ಕೆಲವು ವ್ಯತ್ಯಾಸಗಳಿದ್ದು ಅವು ಎರಡರ ನಡುವೆ ವ್ಯತ್ಯಾಸವನ್ನು ಗುರುತಿಸಲು ನಿಮಗೆ ಸಹಾಯ ಮಾಡುತ್ತವೆ.

ಅಲರ್ಜಿಕ್ ರಿನಿಟಿಸ್

ಸಾಮಾನ್ಯ ಶೀತ

ಅಲರ್ಜಿನ್‌ಗಳಿಂದ ಉಂಟಾಗುತ್ತದೆ

ಸೂಕ್ಷ್ಮ ಜೀವಾಣುಗಳಿಂದ ಉಂಟಾಗುತ್ತದೆ

ನಿಮಗೆ ಸಾಮಾನ್ಯವಾಗಿ ಜ್ವರ ಅಥವಾ
ದೇಹದ ನೋವು ಇರುವುದಿಲ್ಲ

ನಿಮಗೆ ಜ್ವರ ಮತ್ತು ದೇಹದ ನೋವು ಇರುತ್ತದೆ

ನಿಮ್ಮ ಮೂಗಿನೊಳಗಿನ ಲೋಳೆಯು ಸ್ಪಷ್ಟ
ಹಾಗೂ ನೀರಿನಂತಾಗಿರುತ್ತದೆ

ನಿಮ್ಮ ಮೂಗಿನೊಳಗಿನ ಲೋಳೆಯು ಹಳದಿ ಅಥವಾ ಹಸಿರು ಬಣ್ಣದ್ಧು cತ್ತು ದಪ್ಪವಾಗಿರುತ್ತದೆ

ಸೀನಿನ ದಾಳಿಯು ನಿಲ್ಲುವ ಮುನ್ನ, ನೀವು ಬಹಳ ಸಲ ಸೀನುತ್ತೀರಿ

ಸೀನುಗಳು ವಿರಳವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಒಂದು ಸಮಯದಲ್ಲಿ ಕೆಲವಷ್ಟಕ್ಕೇ ನಿರ್ಭಂಧಿತವಾಗಿ ಇರುತ್ತವೆ

ಅತ್ಯಂತ ನೀರಿರುವಂತಹ ಕಣ್ಣುಗಳು

ನೀರೂರುವ ಕಣ್ಣುಗಳಿಲ್ಲ

ಲಕ್ಷಣಗಳು ಕೆಲವು ದಿನಗಳಿಗಿಂತ ಹೆಚ್ಚು ದಿನ ಉಳಿಯುತ್ತವೆ

ಲಕ್ಷಣಗಳು ಕೆಲವು ದಿನಗಳಲ್ಲಿ ಹೊರಟು ಹೋಗುತ್ತವೆ

 

ನೀವು ಅಲರ್ಜಿಕ್‌ ರಿನಿಟಿಸ್‌ನ ಯಾವುದೇ/ಎಲ್ಲಾ ಲಕ್ಷಣಗಳನ್ನು ಹೊಂದಿದ್ದೀರಿ ಎಂದುಕೊಂಡರೆ, ಸರಿಯಾದ ರೋಗನಿದಾನ ಮತ್ತು ಚಿಕಿತ್ಸೆಗಾಗಿ ನಿಮ್ಮ ವೈದ್ಯರ ಸಲಹೆ ಕೇಳುವುದು ಮುಖ್ಯವಾಗಿರುತ್ತದೆ. ಅಲರ್ಜಿ ರಿನಿಟಿಸ್ ಅನ್ನು ಸಕಾಲದಲ್ಲಿ ಚಿಕಿತ್ಸಿಸುವುದು ಮುಖ್ಯವಾಗಿರುತ್ತದೆ, ಏಕೆಂದರೆ ಅದು ಅಸ್ತಮಾ, ಕಿವಿ ಸೋಂಕುಗಳು ಮತ್ತು ಸಿನುಸಿಟಿಸ್ ಮುಂತಾದ ತೊಡಕುಗಳಿಗೆ ಕಾರಣವಾಗಬಹುದು.

 

 

ಬಲ ಗೈ ಬದಿಯ ಬ್ಯಾನರುಗಳು

ಬಲ ಗೈ ಬದಿಯ ಬ್ಯಾನರು #1- ಪುಷ್ಪೇಂದ್ರ ಸಿಂಗ್ ತನ್ನ ಅಲರ್ಜಿಕ್‌ ರಿನಿಟಿಸ್ಅನ್ನು ಜಯಿಸಿದ್ಧಾನೆ ಮತ್ತು ಒಳ್ಳೆಯ ಜೀವನವನ್ನು ಜೀವಿಸುತ್ತಿದ್ದಾನೆ. (ಸ್ಫೂರ್ತಿದಾಯಕ ಕಥೆ)

ಬಲ ಗೈ ಬದಿಯ ಬ್ಯಾನರು #2- ಒಂದು ಅಲರ್ಜಿಯಿರುವ ಪ್ರತಿಯೊಬ್ಬರಿಗೂ ಅಲರ್ಜಿಕ್‌ ರಿನಿಟಿಸ್ ಇರುತ್ತದೆಯೇ? (ಪದೇಪದೇ ಕೇಳುವ ಪ್ರಶ್ನೆಗಳು)

ಬಲ ಗೈ ಬದಿಯ ಬ್ಯಾನರು 3- ತಮ್ಮ ಉಸಿರಾಟದ ಸಮಸ್ಯೆಗಳನ್ನು ಯಶಸ್ವಿಯಾಗಿ ಜಯಿಸಿದ ಜನರೊಂದಿಗೆ ಸಂಪರ್ಕ ಸಾಧಿಸಲು ಸಮುದಾಯವನ್ನು (ಬ್ರೀಥ್‌ಫ್ರೀ ಸಮುದಾಯ) ಸೇರಿಕೊಳ್ಳಿರಿ

 

Please Select Your Preferred Language