ಸಿಒಪಿಡಿ

ಸಿಒಪಿಡಿಗೆ ಚಿಕಿತ್ಸೆ ನೀಡುವುದು (ಚಿಕಿತ್ಸೆ)

ಸಿಒಪಿಡಿ ಗುಣ ಆಗುವುದಿಲ್ಲ, ಆದರೆ ನಿಮಗೆ ಅದನ್ನು ನಿಯಂತ್ರಣದಡಿಯಲ್ಲಿಟ್ಟುಕೊಳ್ಳಲು ಸಹಾಯ ಮಾಡಬಹುದಾದ ಚಿಕಿತ್ಸೆಗಳು ಇವೆ; ಮತ್ತು ನೀವು ಸಿಒಪಿಡಿಯನ್ನು ಹೊಂದಿರುವ ಕಾರಣದಿಂದಾಗಿ ನೀವು ಪೂರ್ಣ ಜೀವನವನ್ನು ನಡೆಸಲು ಸಾಧ್ಯವಿಲ್ಲ ಎಂದು ಅರ್ಥವಲ್ಲ. ಸರಿಯಾದ ಔಷಧೋಪಚಾರ, ಸರಿಯಾದ ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳೊಂದಿಗೆ ನೀವು ಸಿಒಪಿಡಿಯನ್ನು ಸುಲಭವಾಗಿ ನಿರ್ವಹಿಸಬಹುದು.

a)     ಧೂಮಪಾನ ಮಾಡಬೇಡಿ

ನೀವು ಧೂಮಪಾನಿಯಾಗಿದ್ದರೆ, ಧೂಮಪಾನವನ್ನು ನಿಲ್ಲಿಸಿ. ನೀವು ಮಾಡಲೇಬೇಕಾದ ಏಕೈಕ ಅತ್ಯಂತ ಮುಖ್ಯವಾದ ಜೀವನಶೈಲಿ ಬದಲಾವಣೆ ಎಂದರೆ ಇದು. ಧೂಮಪಾನದಿಂದ ದೂರವಿರುವುದು, ನೀವು ಎಷ್ಟು ಕಾಲದಿಂದ ಅಭ್ಯಾಸವನ್ನು ಹೊಂದಿದ್ದೀರಿ ಎಂಬುದನ್ನು ಪರಿಗಣಿಸದೆ, ಶ್ವಾಸಕೋಶದ ಅಂಗಾಂಶಗಳಿಗೆ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈಗ, ನಿಮಗೆ ಧೂಮಪಾನವನ್ನು ತ್ಯಜಿಸಲು  ಸಹಾಯ ಮಾಡುವ ಉತ್ಪನ್ನಗಳಿವೆ. ನಿಮ್ಮ ವೈದ್ಯರು ಇವುಗಳ ಬಗ್ಗೆ ನಿಮಗೆ ಹೇಳಬಹುದು.

 

b) ಇತರ ಶ್ವಾಸಕೋಶದ ಉದ್ರೇಕಕಾರಿಗಳನ್ನು ತಪ್ಪಿಸಿ

ಧೂಮಪಾನದ ಹೊರತಾಗಿ, ನಿಮ್ಮ ಶ್ವಾಸಕೋಶಗಳನ್ನು ಉದ್ರೇಕಗೊಳಿಸುವ ಪರೋಕ್ಷ ಹೊಗೆ, ರಾಸಾಯನಿಕ ಧೂಮಗಳು ಮತ್ತು ಧೂಳುಗಳಂತಹ, ಇತರ ಅಂಶಗಳು ಇರಬಹುದಾಗಿದ್ದು, ಅವುಗಳನ್ನು ತಪ್ಪಿಸಬೇಕು.

 

c)     ಸರಿಯಾದ ಔಷಧೋಪಚಾರವನ್ನು ನಿಯತವಾಗಿ ತೆಗೆದುಕೊಳ್ಳಿ

ಔಷಧೋಪಚಾರಗಳು ಲಕ್ಷಣಗಳನ್ನು ಕಡಿಮೆ ಮಾಡಬಹುದು ಮತ್ತು ಹಠಾತ್ ತೀವ್ರವಾಗುವುದನ್ನು ಕಡಿಮೆಮಾಡಬಹುದು. ಸಿಒಪಿಡಿ ಔಷಧವು ವಾಯುಮಾರ್ಗಗಳಿಗೆ 2 ರೀತಿಗಳಲ್ಲಿ ಸಹಾಯ ಮಾಡುತ್ತದೆ - ಅವುಗಳನ್ನು ಹಿಗ್ಗಿಸುತ್ತದೆ ಮತ್ತು ಊತವನ್ನು ತಗ್ಗಿಸುತ್ತದೆ. ಸಿಒಪಿಡಿಗಾಗಿ ಎಲ್ಲಾ ಇತ್ತೀಚಿನ ಔಷಧವು ಅತ್ಯಂತ ಪರಿಣಾಮಕಾರಿಯಾಗಿವೆ, ಮತ್ತು ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು ಅವು ಸಹಾಯ ಮಾಡುತ್ತವೆ. ಇನ್ಹೇಲರ್‌ಗಳು ಸುರಕ್ಷಿತವಾಗಿರುವುದರಿಂದ - ಬಹುತೇಕ ಔಷಧಗಳು ಇನ್ಹಲೇಷನ್ ರೂಪದಲ್ಲಿ ಲಭ್ಯವಿವೆ ಲಕ್ಷಣಗಳನ್ನು ನಿಯಂತ್ರಿಸಲು ಔಷಧವನ್ನು (ವೈದ್ಯರು ಶಿಫಾರಿಸಿದಂತೆ) ನಿಯತವಾಗಿ ತೆಗೆದುಕೊಳ್ಳಬೇಕು. 

 

ಕೆಲವೊಮ್ಮೆ, ಸಿಒಪಿಡಿಯು ರಕ್ತದಲ್ಲಿನ ಆಮ್ಲಜನಕದ ಮಟ್ಟಗಳು ಕಡಿಮೆಯಾಗಲು ಕಾರಣವಾಗಬಹುದು. ಅದರ ಬಗ್ಗೆ ನೀವು ಉದ್ವಿಗ್ನಗೊಳ್ಳಲು ಪ್ರಾರಂಭಿಸುವ ಮೊದಲು, ಈ ಪರಿಸ್ಥಿತಿಯನ್ನು ಸುಲಭವಾಗಿ ಪೂರಕ ಆಮ್ಲಜನಕದೊಂದಿಗೆ ನಿಭಾಯಿಸಬಹುದು.

d) ಲಸಿಕೆಗಳು

ಸಿಒಪಿಡಿ ಹೊಂದಿರುವ ಜನರು ಶ್ವಾಸಕೋಶದ ಸೋಂಕುಗಳನ್ನು ಪಡೆಯುವ ಅಧಿಕ ಸಾಧ್ಯತೆಯಿರುತ್ತದೆ, ಆದ್ದರಿಂದ ನೀವು ಪ್ರತಿ ವರ್ಷವೂ ಫ್ಲೂ ಲಸಿಕೆಯನ್ನು ಪಡೆಯಬೇಕಾಗಿರುತ್ತದೆ. 

Please Select Your Preferred Language