ಅಲರ್ಜಿಕ್ ರಿನಿಟಿಸ್

ಚಿಕಿತ್ಸೆ

ನಿಮ್ಮ ಅಲರ್ಜಿನ್‌ಗಳನ್ನು ನೀವು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಿಸಿವುದು ಮತ್ತು ಅವುಗಳಿಂದ ತಪ್ಪಿಸಿಕೊಳ್ಳುವುದು ಅಲರ್ಜಿಕ್ ರೈನೈಟಿಸ್‌ಗೆ ಉತ್ತಮ ಚಿಕಿತ್ಸೆಯಾಗಿದೆ. 

ಅಲರ್ಜಿನ್‌ಗಳಿಂದ ಹೇಗೆ ತಪ್ಪಿಸಿಕೊಳ್ಳುವುದು

ಹೊರಾಂಗಣ ಅಲರ್ಜಿನ್‌ಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು, ಉದಾಹರಣೆಗೆ, ನೀವು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ:

ಪರಾಗ ಋತುವಿನಲ್ಲಿ, ಮಧ್ಯ-ಬೆಳಗಿನ ಸಮಯದಲ್ಲಿ ಮತ್ತು ಸಂಜೆಯ ಆರಂಭದ ಹೊತ್ತಿನಲ್ಲಿ ಅಥವಾ  ಹೊರಭಾಗದಲ್ಲಿ ಗಾಳಿಯು ಜೋರಾಗಿರುವಾಗ  ಒಳಾಂಗಣದಲ್ಲಿಯೇ ಇರಿ, ಏಕೆಂದರೆ ಗಾಳಿಯಲ್ಲಿ ಪರಾಗದ ಎಣಿಕೆಯು ಈ ಸಮಯಗಳಲ್ಲಿ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ.

ತೋಟಗಾರಿಕೆ ಮಾಡುವಾಗ ಅಥವಾ ಧೂಳಿನ ಸ್ಥಳಕ್ಕೆ ಭೇಟಿ ನೀಡುವಾಗ ಮಾಸ್ಕ್ ಅನ್ನು ಧರಿಸಿರಿ.

ಬಟ್ಟೆಗಳನ್ನು ಮತ್ತು ಟವೆಲ್ಲುಗಳನ್ನು ಹೊರಗೆ ಒಣಗಿಸಲು ಪ್ರಯತ್ನಿಸಬೇಡಿ ಏಕೆಂದರೆ ಅವುಗಳಿಗೆ ಪರಾಗ ಮತ್ತು ಧೂಳು ಅಂಟಿಕೊಳ್ಳುತ್ತದೆ

ನೀವು ಹೊರಗೆ ಬಂದಾಗ, ಯಾವಾಗಲೂ ನಿಮ್ಮ ಕಣ್ಣುಗಳನ್ನು ರಕ್ಷಿಸಲು  ಮತ್ತು ಕಣ್ಣುಗಳ ಉಜ್ಜುವಿಕೆಯನ್ನು ತಡೆಗಟ್ಟಲು ಕನ್ನಡಕಗಳನ್ನು/ ಕಪ್ಪು ಕನ್ನಡಕಗಳನ್ನು ಧರಿಸಿ; ಹಾಗೆ ಮಾಡುವುದರಿಂದ ಅವುಗಳನ್ನು ಕೆರಳಿಸುತ್ತದೆ ಮತ್ತು ನಿಮ್ಮ ಲಕ್ಷಣಗಳನ್ನು ಇನ್ನಷ್ಟು ಕೆಟ್ಟದಾಗಿ ಮಾಡಬಹುದು.

ಒಳಾಂಗಣ ಅಲರ್ಜಿನ್‌ಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು, ಉದಾಹರಣೆಗೆ, ನೀವು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ:

ಕಿಟಕಿಗಳನ್ನು ಮುಚ್ಚಿ ಇರಿಸಲು ಪ್ರಯತ್ನಿಸಿ ಮತ್ತು ಹಾಗೇ ಮಾಡಿ 

ಶುಷ್ಕ-ಧೂಳು ಒರಸುವಿಕೆ ಅಥವಾ ಗುಡಿಸುವ ಬದಲು, ಒದ್ದೆಯಾದ ಒರೆಸುಬಟ್ಟೆ ಅಥವಾ ಮಾಪ್‌ನೊಂದಿಗೆ ನೆಲಗಳನ್ನು ಸ್ವಚ್ಛ ಮಾಡಿ

ಗೋಡೆಗಳ ಮೇಲಿನ ಬೂಷ್ಟುಗಳ ತೇಪೆಗಳನ್ನು (ಶಿಲೀಂಧ್ರಗಳು), ಏನಾದರು ಇದ್ದಲ್ಲಿ, ತೆಗೆದುಹಾಕಲು ನಿಯತವಾಗಿ ಗೋಡೆಗಳನ್ನು ಸ್ವಚ್ಛಗೊಳಿಸಿ 

ಆಗಾಗ್ಗೆ, ಬಿಸಿ ನೀರಿನಲ್ಲಿ ನಿಮ್ಮ ಕಂಬಳಿಗಳು, ದಿಂಬು ಕವರ್‌ಗಳು ಮತ್ತು ಬೆಡ್‌ಶೀಟುಗಳನ್ನು ಒಗೆಯಿರಿ.

ಕಾಲಕಾಲಕ್ಕೆ ಕಾರ್ಪೆಟ್ ಮತ್ತು ಪರದೆಗಳನ್ನು ಸ್ವಚ್ಛ ಮಾಡಿಸಿಟ್ಟುಕೊಳ್ಳಿ

ಧೂಳು ಹುಳಗಳಿಗೆ ನಿಮ್ಮ ಒಡ್ಡಿಕೊಳ್ಳುವಿಕೆಯನ್ನು ಕಡಿಮೆ ಮಾಡಲು ನಿಮ್ಮ ಎಲ್ಲಾ ಹಾಸಿಗೆ ಸಾಮಾನುಗಳನ್ನು - ದಿಂಬುಗಳು, ಹಾಸಿಗೆ, ರಜಾಯಿಗಳು ಇತ್ಯಾದಿಗಳಿಗೆ ಧೂಳು ಹುಳು-ವಿರೋಧಿ ಕವರ್‌ಗಳನ್ನು ಬಳಸಿ

ನಿಮ್ಮ ಮನೆಯಲ್ಲಿ ತೇವಾಂಶ ಮಟ್ಟಗಳನ್ನು ಸಾಧ್ಯವಾದಷ್ಟು ಕಡಿಮೆ ಇರಿಸಿ (ನೀವು ಒಂದು ಡಿ-ಹ್ಯುಮಿಡಿಫೈಯರ್ ಅನ್ನು ಬಳಸಬಹುದು), ಹಾಗಾಗಿ ಬೂಷ್ಟುಗಳು ಪ್ರವರ್ಧಿಸಲು ಸಾಧ್ಯವಾಗುವುದಿಲ್ಲ.

ಸ್ನಾನಗೃಹಗಳು, ಅಡಿಗೆಮನೆ, ಅಟ್ಟಗಳು ಮತ್ತು ನೆಲಮಾಳಿಗೆಗಳಂತಹ ಸ್ಥಳಗಳನ್ನು ನಿಯತವಾಗಿ ಸ್ವಚ್ಛಗೊಳಿಸಿ.

ನಿಮ್ಮ ಕಾರಿನ ಮತ್ತು ಮನೆಯ ನಿಮ್ಮ ಹವಾನಿಯಂತ್ರಣ ಘಟಕವು ಸ್ವಚ್ಛವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ

ನೀವು ಸಾಕುಪ್ರಾಣಿಗಳಿಗೆ ಅಲರ್ಜಿ ಹೊಂದಿದ್ದರೆ, ಇವುಗಳನ್ನು ನೆನಪಿಡಿ -  

ಯಾವುದೇ ಸಾಕುಪ್ರಾಣಿಗಳನ್ನು ಮುಟ್ಟಿದ ನಂತರ ತಕ್ಷಣ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ

ಸಾಕುಪ್ರಾಣಿಗಳನ್ನು ಹೊಂದಿರುವ ಸ್ನೇಹಿತರಲ್ಲಿಗೆ ಭೇಟಿ ನೀಡಿದ ನಂತರ ನಿಮ್ಮ ಬಟ್ಟೆಗಳನ್ನು ಚೆನ್ನಾಗಿ ಒಗೆಯಿರಿ.

ನಿಮ್ಮ ಮನೆ ಸಾಕುಪ್ರಾಣಿಯನ್ನು ಹೊರಾಂಗಣದಲ್ಲಿ ಇರಿಸಿ 

 

ಔಷಧ

ನಿಮ್ಮ ಅಲರ್ಜಿಕ್ ರೈನೈಟಿಸ್‌ಗೆ ಚಿಕಿತ್ಸೆ ನೀಡಲು ಸಹಾಯ ಮಾಡಲು ನೀವು ಹಲವಾರು ಔಷಧಗಳನ್ನು ಸಹ ಬಳಸಬಹುದು. ನಿಮ್ಮ ಅಲರ್ಜಿಯು ಬಹಳ ತೀವ್ರವಾದರೆ, ನಿಮ್ಮ ರೋಗಲಕ್ಷಣಗಳ ತೀವ್ರತೆ ಮತ್ತು ಪ್ರಕಾರವನ್ನು ಅವಲಂಬಿಸಿ,  ನಿಮ್ಮ ವೈದ್ಯರು ಮೂಗಿನ ಸ್ಪ್ರೇಗಳು, ಮಾತ್ರೆಗಳು, ಕಣ್ಣಿನ ಡ್ರಾಪ್ಸ್ಗಳು, ಸಿರಪ್‌ಗಳು ಮತ್ತು ಇಮ್ಯುನೋಥೆರಪಿ ಅಥವಾ ಅಲರ್ಜಿ ಶಾಟ್‌ಗಳಂತಹ ಔಷಧಗಳನ್ನು ಕೂಡಾ ಶಿಫಾರಸು ಮಾಡಬಹುದು.

ಜಗತ್ತಿನಾದ್ಯಂತ, ಮೂಗಿನ ಸ್ಪ್ರೇಗಳನ್ನು ಅಲರ್ಜಿಕ್ ರೈನೈಟಿಸ್‌ಗೆ ಚಿಕಿತ್ಸೆ ನೀಡಲು ಒಂದು ಪರಿಣಾಮಕಾರಿ ಮಾರ್ಗವೆಂದು ವ್ಯಾಪಕವಾಗಿ ಸ್ವೀಕೃತವಾಗಿವೆ. 

ಮೂಗಿನ ಸ್ಪ್ರೇಗಳು ಔಷಧವನ್ನು ನೇರವಾಗಿ ಸಮಸ್ಯೆಯ ಪ್ರದೇಶಕ್ಕೆ, ಅಂದರೆ ಮೂಗಿಗೆ, ತಲುಪಿಸುತ್ತವೆ. ಔಷಧವು ನೇರವಾಗಿ ಮೂಗು ತಲುಪುವುದರಿಂದ, ಅದರ ಡೋಸ್ ಗಣನೀಯವಾಗಿ ಕಡಿಮೆಯಾಗಿರುತ್ತದೆ, ‌ಅರ್ಥಾತ್, ಮೂಗಿನ ಸ್ಪ್ರೇಗಳು ಕನಿಷ್ಟ ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ.  ನಿಮ್ಮ ಅಲರ್ಜಿಕ್ ರೈನೈಟಿಸ್ ಅನ್ನು ನೀವು ಚಿಕಿತ್ಸೆ ಮಾಡುವುದು ಮುಖ್ಯವಾಗಿದೆ ಏಕೆಂದರೆ ಸಮಯಕ್ಕೆ ಅದಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಅದು ಕಿವಿ ಸೋಂಕುಗಳು, ಸೈನುಸೈಟಿಸ್ ಮತ್ತು ಮೂಗಿನ ಪಾಲಿಪ್ಸ್‌ನಂತಹ ತೊಡಕುಗಳಿಗೆ ಕಾರಣವಾಗಬಹುದು.

 

ಬಲಗೈ ಬದಿಯ ಬ್ಯಾನರುಗಳು

ಬಲಗೈ ಬದಿಯ ಬ್ಯಾನರು #1- ಪುಷ್ಪೇಂದ್ರ ಸಿಂಗ್ ತನ್ನ ಅಲರ್ಜಿಕ್‌ ರೈನೈಟಿಸ್ ಅನ್ನು ಜಯಿಸಿದ್ದಾನೆ ಮತ್ತು ಒಳ್ಳೆಯ ಜೀವನವನ್ನು ನಡೆಸುತ್ತಿದ್ದಾನೆ. (ಸ್ಫೂರ್ತಿದಾಯಕ ಕಥೆ)

ಬಲಗೈ ಬದಿಯ ಬ್ಯಾನರು #2- ಅಲರ್ಜಿಯಿರುವ ಎಲ್ಲರಿಗೂ ಅಲರ್ಜಿಕ್‌ ರೈನೈಟಿಸ್ ಇರುತ್ತದೆಯೇ? [ಪದೇಪದೇ ಕೇಳುವ ಪ್ರಶ್ನೆಗಳು]

ಬಲಗೈ ಬದಿಯ ಬ್ಯಾನರು 3- ತಮ್ಮ ಉಸಿರಾಟದ ಸಮಸ್ಯೆಗಳನ್ನು  ಯಶಸ್ವಿಯಾಗಿ ಜಯಿಸಿದ ಜನರೊಂದಿಗೆ ಸಂಪರ್ಕ ಸಾಧಿಸಲು ಸಮುದಾಯವನ್ನು (ಬ್ರೀಥ್‌ಫ್ರೀ ಸಮುದಾಯ) ಸೇರಿ

 

Please Select Your Preferred Language