ಬ್ರೀಥ್‌ಫ್ರೀ ಉತ್ಸವ

ದೇಶದ ಅತಿದೊಡ್ಡ ರೋಗಿ ಶಿಕ್ಷಣ ಕಾರ್ಯಕ್ರಮಗಳಲ್ಲಿ ಒಂದಾದ ಬ್ರೀಥ್‌ಫ್ರೀಯು, ಉಸಿರಾಟದ ಸಮಸ್ಯೆಗಳು ಮತ್ತು ಅವುಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಪ್ರಚಾರ ಮಾಡುವ ಗುರಿ ಹೊಂದಿದೆ. ಆ ಉದ್ದೇಶ ಸಾಧನೆಗಾಗಿ, ಬ್ರೀಥ್‌ಫ್ರೀನಲ್ಲಿ ನಾವು, ಹಲವಾರು ವರ್ಷಗಳಲ್ಲಿ, ಜನರಲ್ಲಿ ತಮ್ಮ ಶ್ವಾಸಕೋಶದ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಸಹಾಯ ಮಾಡಲು ವಿವಿಧ ಶಿಬಿರಗಳನ್ನು ಮತ್ತು ಚಟುವಟಿಕೆಗಳನ್ನು ನಡೆಸಿದ್ದೇವೆ. 

ದೇಶದ ಪ್ರತಿ ಭಾಗಕ್ಕೂ ಬ್ರೀಥ್‌ಫ್ರೀಯನ್ನು ಕೊಂಡೊಯ್ಯುವ ಬಯಕೆಯಿಂದ ಮತ್ತು ಸಮಸ್ಯೆಯನ್ನು ಹೊಂದಿದ್ದು ಅದರ ಬಗ್ಗೆ ಗೊತ್ತಿಲ್ಲದವರಿಗಾಗಿ ರೋಗನಿದಾನ ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡಲು ಅಗತ್ಯವಾದ ವೈದ್ಯಕೀಯ ಮೂಲಸೌಕರ್ಯವನ್ನು ಒದಗಿಸಲು ಪ್ರಯತ್ನಿಸುತ್ತಿದ್ದು, ನಾವು ಬ್ರೀಥ್‌ಫ್ರೀ  ಉತ್ಸವವನ್ನು ರಚಿಸಿದ್ದೇವೆ.

ಬ್ರೀಥ್‌ಫ್ರೀ ಉತ್ಸವವು ಬ್ರೀಥ್‌ಫ್ರೀ ಕುಟುಂಬಕ್ಕೆ ಒಂದು ಅತ್ಯಗತ್ಯ ಪ್ರಚಾರವಾಗಿದೆ, ಏಕೆಂದರೆ ಅಸ್ತಮಾ, ಇನ್ಹಲೇಷನ್ ಥೆರಪಿ ಬಗ್ಗೆ ಇರುವ ಎಲ್ಲಾ ತಪ್ಪಭಿಪ್ರಾಯಗಳನ್ನು ಕೊನೆಗಾಣಿಸಲು, ಮತ್ತು ಜನರು ಭಯವಿಲ್ಲದೆ ಅವುಗಳನ್ನು ಸ್ವೀಕರಿಸಲು ಸಹಾಯ ಮಾಡಲು ಕೆಲಸ ಮಾಡುತ್ತದೆ. ಇನ್ಹಲೇಷನ್ ಥೆರಪಿಯ ವಿವಿಧ ಅಂಶಗಳನ್ನು ಪರಿಶೋಧಿಸಲು ಮತ್ತು ವಿವರಿಸಲು, ನಾವು ಬ್ರೀಥ್‌ಫ್ರೀ ಸ್ಕ್ರೀನಿಂಗ್ ಯಾತ್ರ ಮತ್ತು ಬ್ರೀಥ್‌ಫ್ರೀ ಕೆಮಿಸ್ಟ್‌ಗಳಂತಹ ವೇದಿಕೆಗಳನ್ನು ನಿರ್ಮಿಸಿದ್ದೇವೆ.

 ಬ್ರೀಥ್‌ಫ್ರೀ ಯಾತ್ರವು ದೇಶದಾದ್ಯಂತ,  ವಿಶೇಷತೆಗಳ 300 ಕ್ಕಿಂತಲೂ ಹೆಚ್ಚಿನ ವೈದ್ಯರೊಂದಿಗೆ, ಸುಮಾರು 400 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸುಮಾರು 100,000 ರೋಗನಿದಾನವಾಗದಿರುವ ಜನರನ್ನು ತಲುಪಿದೆ. ಪ್ರಸ್ತುತ, ಅದು 3ನೇ ವರ್ಷದಲ್ಲಿದ್ದು, ಉಸಿರಾಟದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಕೆಲಸ ಮಾಡುವ ವಿವಿಧ ತಂಡಗಳಿಗೆ, ಮತ್ತು ಅದರ ಪ್ರೇಕ್ಷಕರಿಗೆ, ಸಕಾರಾತ್ಮಕ ವರ್ಚಸ್ಸು ಸೃಷ್ಟಿಸುವುದಕ್ಕೆ ಬ್ರೀಥ್‌ಫ್ರೀ ಉತ್ಸವವು ಅವಶ್ಯಕವಾಗಿದೆ