ವಿಶ್ವ ಅಸ್ತಮಾ ಮಾಸ - ಮೇ 02, 2017

ಒಟ್ಟಾರೆ ಆರೋಗ್ಯದ ವಿಷಯಕ್ಕೆ ಬಂದಾಗ, ನಮ್ಮ ಶರೀರಗಳು ಚೆನ್ನಾಗಿ ಎಣ್ಣೆ-ಹಚ್ಚಿದ ಯಂತ್ರದಂತೆ ಕೆಲಸ ಮಾಡಬೇಕಾಗಿರುತ್ತವೆ.  ಇದರರ್ಥ ನಮ್ಮ ಎಲ್ಲ ಅಂಗಗಳು - ಹೃದಯ, ಮಿದುಳು, ಹೊಟ್ಟೆ ಮತ್ತು ನಮ್ಮ ಶ್ವಾಸಕೋಶಗಳು ಸಹ - ಅತ್ಯುತ್ತಮ ಸ್ಥಿತಿಯಲ್ಲಿರಬೇಕು  ಉಸಿರಾಡುವ ಸಲುವಾಗಿ  ನಮ್ಮ ಶ್ವಾಸಕೋಶಗಳ ಸಾಮರ್ಥ್ಯವನ್ನು ಎಷ್ಟು ಸ್ವಾಭಾವಿಕವೆಂದು ಅಂದುಕೊಳ್ಳುತ್ತೇವೆಂದರೆ ನಮಗೆ ಸ್ವಲ್ಪ ತೊಂದರೆ ಉಂಟಾಗುವವರೆಗೂ ನಾವು ಅವುಗಳ ಬಗ್ಗೆ ಯೋಚಿಸುವುದೇ ಇಲ್ಲ. ಆದರೆ, ಬಹಳಷ್ಟು ಜನರು ಶ್ವಾಸಕೋಶಗಳಿಗೆ ಗಮನ ನೀಡುವುದಿಲ್ಲ, ಮತ್ತು ಹಾಗಾಗಿ ಅವರಲ್ಲಿ ಒಂದು ಉಸಿರಾಟದ ಸಮಸ್ಯೆಯೊಂದನ್ನು ಪತ್ತೆಹಚ್ಚಿದರೆ (ಮತ್ತು ಪತ್ತೆಹಚ್ಚಿದಾಗ) ಚಿಂತಿತರಾಗುತ್ತಾರೆ. ಅಸ್ತಮಾ ಮತ್ತು ಅಲರ್ಜಿಗಳು ಮುಂತಾದ ಉಸಿರಾಟದ ತೊಂದರೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಯಿಂದ, ಅವುಗಳನ್ನು ಸುಲಭವಾಗಿ ಚಿಕಿತ್ಸೆ ನೀಡಬಹುದು ಮತ್ತು ನಿರ್ವಹಿಸಬಹುದು.
ವಿವಿಧ ಉಸಿರಾಟದ ತೊಂದರೆಗಳು ಮತ್ತು ಚಿಕಿತ್ಸೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು, ವಿಶ್ವ ಆಸ್ತಮಾ ದಿನದಂದು, ಅಂದರೆ ಮೇ 02, 2017, ಬ್ರೀಥ್‌ಫ್ರೀಯು (ಸಿಪ್ಲಾದ ಸಾರ್ವಜನಿಕ ಸೇವೆ ಉಪಕ್ರಮ) ದೇಶದಾದ್ಯಂತ ಶಿಬಿರಗಳನ್ನು ಆಯೋಜಿಸಿತು . ಈ ಶಿಬಿರಗಳು ಜನರಿಗೆ ತಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಸ್ಪೈರೋಮೀಟರ್‌ಗಳನ್ನು ಮತ್ತು ಬ್ರೀಥ್-ಒ-ಮೀಟರ್‌ಗಳನ್ನು ಬಳಸಿ ಪರೀಕ್ಷಿಸಲು ಸಹಾಯ ಮಾಡಿದುವು, ಹಾಗೂ ವೈದ್ಯರು ವಿವಿಧ ಉಸಿರಾಟದ ಸಮಸ್ಯೆಗಳ ಮೂಲಗಳನ್ನು, ಮತ್ತು ಇನ್ಹೇಲರ್‌ಗಳು ಅವುಗಳಿಗೆ ಚಿಕಿತ್ಸೆ ನೀಡಲು ಏಕೆ ಒಂದು ಪರಿಣಾಮಕಾರಿ ಮಾರ್ಗವಾಗಿದೆ ಎಂದು ವಿವರಿಸಿದರು. ಇನ್ಹೇಲರ್ ಕುರಿತ ಮಿಥ್ಯಗಳ ಬಗ್ಗೆ ವೈದ್ಯರು ಮಾತನಾಡಿದರು ಮತ್ತು ಇನ್ಹೇಲರ್‌ಗಳು ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಸಾಬೀತುಪಡಿಸಲು ಸತ್ತಾಂಶಗಳನ್ನು ವಿವರಿಸಿದರು. 
ಶಿಬಿರಗಳು ಭಾರಿ ಯಶಸ್ವಿಯಾಗಿದ್ದವು, ಮತ್ತು ಅನೇಕ ಜನರು ಶಿಬಿರಗಳಿಗೆ ಹಾಜರಾಗುತ್ತಿದ್ದರು ಮತ್ತು ತಮ್ಮ ನೆರೆಹೊರೆಯಲ್ಲಿ ಹೆಚ್ಚು ಶಿಬಿರಗಳನ್ನು ಸಂಘಟಿಸಲು ಬ್ರೀಥ್‌ಫ್ರೀಗೆ ಕೇಳುತ್ತಿದ್ದರು.