ಉಸಿರುತನ

ಏದುಸಿರು ಎಂದರೇನು?

ಇದು 10 ಸೋಪಾನಪಂಕ್ತಿಗಳ ಮೆಟ್ಟಿಲುಗಳನ್ನು ಹತ್ತಿದ ನಂತರವಾಗಿರಲಿ ಅಥವಾ ವಿಶೇಷವಾಗಿ ಶ್ರಮದಾಯಕ ವ್ಯಾಯಾಮದ ನಂತರವಾಗಿರಲಿ, ನಾವೆಲ್ಲರೂ ಕೆಲವು ವೇಳೆಯಲ್ಲಿ ಏದುಸಿರನ್ನು ಅನುಭವಿಸಿದ್ದೇವೆ. ಇದು ಉಸಿರಾಡಲು ಕಷ್ಟವೆಂದು ನಿಮಗೆ ಕಂಡಾಗ ನೀವು ಅನುಭವಿಸುವ ಒಂದು ಅನಾನುಕೂಲದ ಭಾವನೆ. ನೀವು ಅತಿಯಾಗಿ ಶ್ರಮ ಪಟ್ಟರೆ ಅದರಿಂದ ಏದುಸಿರಿನ ಅನುಭವವಾಗುವುದು ಸಂಪೂರ್ಣವಾಗಿ ಸಹಜವಾಗಿದೆ. ಈ ಸಮಯಗಳಲ್ಲಿ ನಿಮ್ಮ ದೇಹಕ್ಕೆ ಹೆಚ್ಚು ಆಮ್ಲಜನಕವನ್ನು ಒದಗಿಸುವ ಸಲುವಾಗಿ ನೀವು ವೇಗವಾಗಿ ಉಸಿರಾಡುವಿರಿ. ಆದರೆ, ನೀವು ಸಂಪೂರ್ಣವಾಗಿ ಸಾಮಾನ್ಯ ಚಟುವಟಿಕೆಗಳನ್ನು ಮಾಡುವಾಗ ನಿಮಗೆ ಏದುಸಿರಿನ ಅನುಭವವಾದರೆ, ಆಗ ಅದು ವೈದ್ಯರಲ್ಲಿಗೆ ಭೇಟಿ ನೀಡಬೇಕಾದ ಸಮಯ. ಏದುಸಿರು ಅಸ್ತಮಾ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶ ರೋಗ (ಸಿಒಪಿಡಿ), ರಕ್ತಹೀನತೆ ಮತ್ತು ಆತಂಕ ಇತರವುಗಳ ಪೈಕಿಯಂತಹ, ಒಂದು ಗಂಭೀರವಾದ ಸಮಸ್ಯೆಯ ಲಕ್ಷಣವಾಗಿರಬಹುದು. ಆದರೂ, ಒಂದು ನಿಖರವಾದ ರೋಗನಿದಾನ ಮತ್ತು ಸರಿಯಾದ ಚಿಕಿತ್ಸೆಯಿಂದಾಗಿ, ಈ ಎಲ್ಲ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು ಮತ್ತು ನಿರ್ವಹಿಸಬಹುದು. ನಿಮಗೆ ಇದ್ದಕ್ಕಿದ್ದಂತೆ ತೀವ್ರ ಏದುಸಿರಿನ ಅನುಭವವಾದರೆ ಏನು ಮಾಡಬೇಕು

1) ಗಾಬರಿಯಾಗಬೇಡಿ, ಏಕೆಂದರೆ ಇದು ಏದುಸಿರನ್ನು ಇನ್ನೂ ಹದಗೆಡಿಸುತ್ತದೆ

2) ಏದುಸಿರು ಉಂಟಾಗುವುದಕ್ಕೆ ಯಾವುದೇ ಒಂದು ಸ್ಪಷ್ಟ ಕಾರಣವಿಲ್ಲದಿದ್ದರೆ ವೈದ್ಯರಿಗೆ ಕರೆ ಮಾಡಿ ಅಥವಾ ಆಸ್ಪತ್ರೆಗೆ ಹೋಗಿ

3) ನಿಮಗೆ ಈಗಾಗಲೇ ಅಸ್ತಮಾ ಇದ್ದರೆ, ನಿಮ್ಮ ವೈದ್ಯರು ವಿವರಿಸಿದಂತೆ ನಿಮ್ಮ ಉಪಶಾಮಕ ಇನ್ಹೇಲರ್ ಅನ್ನು ಬಳಸಿ