ಉಬ್ಬಸ

ಅಸ್ತಮಾ ಬಗ್ಗೆ

ಅಸ್ತಮಾವು ಭಯ ಮತ್ತು ಆತಂಕವನ್ನು ಪ್ರೇರೇಪಿಸುವ ಒಂದು ಸ್ಥಿತಿಯಾಗಿದ್ದು, ವಾಸ್ತವವಾಗಿ, ಅದರ ಬಗ್ಗ ಚಿಂತಿಸುವಂತದು ಏನೂ ಇಲ್ಲ. ಸರಳವಾಗಿ ಹೇಳುವುದಾದರೆ, ಆಸ್ತಮಾವು ಶ್ವಾಸಕೋಶದಲ್ಲಿನ ವಾಯುಮಾರ್ಗಗಳ ಮೇಲೆ ಪರಿಣಾಮ ಬೀರುವ ಒಂದು ಉಸಿರಾಟದ ಸಮಸ್ಯೆಯಾಗಿದೆ. ಏನಾಗುತ್ತದೆಂದರೆ, ವಾಯುಮಾರ್ಗಗಳು ಕೆಲವೊಮ್ಮೆ ಕೆಲವು ವಸ್ತುಗಳಿಗೆ ಪ್ರತಿಕ್ರಿಯಿಸುತ್ತವೆ; ಇದರಿಂದಾಗಿ ಅವುಗಳ ಸುತ್ತಲಿನ ಸ್ನಾಯುಗಳು ಬಿಗಿಗೊಳ್ಳುತ್ತವೆ; ಇದರಿಂದಾಗಿ ವಾಯುಮಾರ್ಗಗಳು ಕಿರಿದಾಗುತ್ತವೆ ಮತ್ತು ಉಸಿರಾಟವನ್ನು ಕಷ್ಟಗೊಳಿಸುತ್ತವೆ. ಇದು ವಾಯುಮಾರ್ಗಗಳ ಒಳಪದರದಿಂದ ಹೆಚ್ಚುವರಿ ಲೋಳೆಯ ಸ್ರವಿಸುವಿಕೆಗೆ ಕೂಡಾ ಕಾರಣವಾಗಬಹುದಾಗಿದ್ದು, ಅದು ವಾಯುಮಾರ್ಗಗಳನ್ನು ಮತ್ತಷ್ಟು ಕಿರಿದಾಗುವಂತೆ ಮಾಡುತ್ತದೆ. ಇವೆಲ್ಲಾ ಭಯವನ್ನು ಉಂಟುಮಾಡಬಹುದು, ಆದರೆ ಅಷ್ಟು ದೊಡ್ಡ ವಿಷಯವೇನಲ್ಲ

ಒಂದು ಸಾಮಾನ್ಯ ಸಕ್ರಿಯ ಜೀವನವನ್ನು ನಡೆಸುವುದರಿಂದ ನೀವು ನಿಮ್ಮನ್ನು ತಡೆಯಬೇಕಾದ ಅಗತ್ಯವಿಲ್ಲ"

ಹಾಗಿದ್ದರೆ, ಆಸ್ತಮಾವು ನಿರಂತರವೇ ಅಥವಾ ಅದು ಬರುತ್ತದೆ ಮತ್ತು ಹೊರಟುಹೋಗುತ್ತದೆಯೇ? ಋತುವಿಗೆ ಅನುಗುಣವಾದ ಅಸ್ತಮಾ ಎಂದು ಕರೆಯಲ್ಪಡುವ ಒಂದು ಸ್ಥಿತಿ ಇದ್ದು, ಇದರಲ್ಲಿ ನಿಮ್ಮ ಲಕ್ಷಣಗಳು ಒಂದು ಋತುವಿನಲ್ಲಿ ಹದಗೆಡಬಹುದು, ಮತ್ತು ಇನ್ನೊಂದರಲ್ಲಿ ಕಾಣಿಸಿಕೊಳ್ಳದಿರಬಹುದು. ಇದು ಅಸ್ತಮಾವು, ಸ್ಪಷ್ಟವಾದ ಕಾರಣವಿಲ್ಲದೆ, ಕೇವಲ ಬರುವ ಮತ್ತು ಹೋಗುವ ಒಂದು ಸ್ಥಿತಿ ಎಂಬ ಒಂದು ತಪ್ಪು ಅಭಿಪ್ರಾಯವನ್ನು ಮೂಡಿಸುತ್ತದೆ. ಆದಾಗ್ಯೂ, ಅಸ್ತಮಾ ನಿಮ್ಮೊಂದಿಗೆ ದೀರ್ಘಕಾಲ ಉಳಿಯುತ್ತದೆ. ಆದರೆ ನೀವು ಆಸ್ತಮಾದ ಬಗ್ಗೆ ಹೆಚ್ಚು ತಿಳಿದುಕೊಂಡರೆ, ಆಸ್ತಮಾವನ್ನು ನಿರ್ವಹಿಸಲು ಅಷ್ಟು ಕಷ್ಟವಾಗುವುದಿಲ್ಲ ಮತ್ತುಅಸ್ತಮಾದ ದಾಳಿಯನ್ನು ನಿರೀಕ್ಷಿಸಬಹುದು ಮತ್ತು ತಡೆಗಟ್ಟಬಹುದು.

 

ಪ್ರತಿಯೊಂದು ವ್ಯಕ್ತಿಯ ಅಸ್ತಮಾವು ಇತರರಿಂದ ಭಿನ್ನವಾಗಿರುತ್ತದೆ. ನೀವು ನೆನಪಿಡಬೇಕಾದ ಅತ್ಯಂತ ಮುಖ್ಯ ವಿಷಯವೆಂದರೆ, ನಿಮ್ಮಂತಹ ಅನೇಕ ಜನರಿದ್ದು, ಅವರು ಯಶಸ್ವಿಯಾಗಿ ಆಸ್ತಮಾವನ್ನು ನಿರ್ವಹಿಸುತ್ತಿದ್ದಾರೆ. ವಿಶ್ವಾದ್ಯಂತ ಸುಮಾರು 300 ಮಿಲಿಯನ್ ಜನರಿಗೆ ಅಸ್ತಮಾ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಕಂಡುಹಿಡಿದಿದ್ದು, ಅದರಲ್ಲಿ 25 ರಿಂದ 30 ಮಿಲಿಯನ್ ಭಾರತದಲ್ಲಿದ್ದಾರೆ. ಆದ್ದರಿಂದ, ಇದು ಒಂದು ಸಾಮಾನ್ಯ ಸ್ಥಿತಿ, ಮತ್ತು ನೀವು ಖಂಡಿತವಾಗಿಯೂ ಒಂಟಿಯಲ್ಲ.

 

ವೀಡಿಯೊ: ಡಾ. ಕುಮಾರ್ ಅವರು ಐಸ್ ಕ್ರೀಮ್ ಮತ್ತು ಅಸ್ತಮಾದ ಮೇಲೆ ಅದರ ಪರಿಣಾಮಗಳ ಬಗ್ಗೆ ಮಾತನಾಡುತ್ತಾರೆ

 

ದುರದೃಷ್ಟವಶಾತ್, ಅಸ್ತಮಾಕ್ಕೆ ಚಿಕಿತ್ಸೆ ಇಲ್ಲದಿದ್ದರೂ, ಆಧುನಿಕ ಔಷಧವು ಲಕ್ಷಣಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿಸಿದೆ, ಹಾಗಾಗಿ ನಿಮಗೆ ಅಸ್ತಮಾ ಇದೆಯೆಂಬುದನ್ನು ನೀವು ಬಹುತೇಕ ಮರೆತುಬಿಡಬಹುದು. ಆದ್ದರಿಂದ, ನಿಮಗೆ ಅಸ್ತಮಾ ಇದೆಯೆಂಬ ಕೇವಲ ಕಾರಣಕ್ಕಾಗಿ, ಸಾಮಾನ್ಯ ಸಕ್ರಿಯ ಜೀವನ ಮಾಡುವುದಕ್ಕೆ ನೀವು ನಿಮ್ಮನ್ನು ನಿಯಂತ್ರಿಸುವ ಅಗತ್ಯವಿಲ್ಲ. ಸಿನಿಮಾ ಉದ್ಯಮದಲ್ಲಿ, ವ್ಯವಹಾರ ಪ್ರಪಂಚದಲ್ಲಿ, ಮತ್ತು ಕ್ರೀಡೆಗಳ ಕ್ಷೇತ್ರದಲ್ಲೂ ಕೂಡ, ಅಸ್ತಮಾವನ್ನು ಹೊಂದಿರುವ ಹಲವಾರು ಪ್ರಮುಖ ವ್ಯಕ್ತಿಗಳು ಇದ್ದಾರೆ, ಆದರೆ ಅದು ಅವರು ಒಂದು ಸಾರ್ಥಕ ಜೀವನವನ್ನು ನಡೆಸುವುದರಿಂದ ಅವರನ್ನು ತಡೆದಿಲ್ಲ.

 

ಬಲಗೈ ಬದಿಯ ಬ್ಯಾನರು 1 - ನೇಹ ಅಸ್ತಮಾವನ್ನು ಹೇಗೆ ಜಯಿಸಿದಳು ಮತ್ತು ತನ್ನ ಮೊದಲ 4 ಕಿ.ಮೀ. ಓಡಿದಳು ಎಂಬುದನ್ನು ಓದಿರಿ. (ಸ್ಫೂರ್ತಿದಾಯಕ ಕಥೆಗಳು)

 

ಬಲಗೈ ಬದಿಯ ಬ್ಯಾನರು 2 - ನಾನು ಅಸ್ತಮಾವನ್ನು ಹೊಂದಿದ್ದರೂ ಸಹ ನಾನು ವ್ಯಾಯಾಮ ಮಾಡಬಹುದೇ ಅಥವಾ ಕ್ರೀಡೆಗಳನ್ನು ಆಡಬಹುದೇ? [ಪದೇಪದೇ ಕೇಳುವ ಪ್ರಶ್ನೆಗಳು]

ಬಲಗೈ ಬದಿಯ ಬ್ಯಾನರು 3 - ತಮ್ಮ ಉಸಿರಾಟದ ಸಮಸ್ಯೆಗಳನ್ನು ಯಶಸ್ವಿಯಾಗಿ ಜಯಿಸಿದ ಜನರೊಂದಿಗೆ ಸಂಪರ್ಕ ಸಾಧಿಸಲು ಸಮುದಾಯವನ್ನು (ಬ್ರೀಥ್ಫ್ರೀ ಸಮುದಾಯ) ಸೇರಿ

 

ಅಸ್ತಮಾ ಪ್ರಚೋದಕಗಳು

ವಾಯು ಮಾರ್ಗಗಳಿಗೆ ಕಿರಿಕಿರಿಯುಂಟುಮಾಡುವ ಒಂದು ಪ್ರಚೋದಕವು ಏನಾದರೂ ಆಗಿರಬಹುದಾಗಿದ್ದು - ಧೂಳು ಹುಳಗಳಿಂದ ಡಿಯೋಡರೆಂಟುಗಳು -, ಇದು ಅಸ್ತಮಾ ಲಕ್ಷಣಗಳನ್ನು ಉದ್ರೇಕಿಸಲು ಕಾರಣವಾಗುತ್ತದೆ ಮತ್ತು ಅಸ್ತಮಾದ ದಾಳಿಗೆ ಕಾರಣವಾಗುತ್ತದೆ. ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಅಸ್ತಮಾದ ದಾಳಿಯನ್ನು ನಿರೀಕ್ಷಿಸುವ ಸಾಧ್ಯತೆಯಿದೆ, ವಿಶೇಷವಾಗಿ ಪ್ರಚೋದಕಗಳನ್ನು ನೀವು ಗುರುತಿಸಬಹುದಾದರೆ. ಆದಾಗ್ಯೂ, ಪ್ರತಿಯೊಬ್ಬರ ಅಸ್ತಮಾ ವಿಭಿನ್ನವಾಗಿರುತ್ತದೆ, ಮತ್ತು ಆದ್ದರಿಂದ ಅವರ ಪ್ರಚೋದಕಗಳು ವಿಭಿನ್ನವಾಗಿರುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಪ್ರಾಮುಖ್ಯವಾಗಿದೆ. ನಿಮ್ಮ ಅಸ್ತಮಾ ಪ್ರಚೋದಕಗಳನ್ನು ತಿಳಿದುಕೊಳ್ಳುವುದು ನಿಮ್ಮ ಅಸ್ತಮಾದ ದಾಳಿಗಳನ್ನು ಊಹಿಸಲು ಮತ್ತು ತಡೆಯಲು ಮತ್ತು ಅಸ್ತಮಾವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

 

ಕೆಲವೊಮ್ಮೆ ಪ್ರಚೋದಕಗಳನ್ನು ಗುರುತಿಸುವುದು ಸುಲಭವಾಗಬಹುದು, ಕೆಲವೊಮ್ಮೆ ಅದು ಸಾಧ್ಯವಾಗದಿರಬಹುದು ಆದಾಗ್ಯೂ, ನಿಮ್ಮ ಪ್ರಚೋದಕಗಳು ಯಾವುವು ಎಂಬುದನ್ನು ಕಂಡುಹಿಡಿಯಲು ಮತ್ತು ಅವುಗಳನ್ನು ತಪ್ಪಿಸಲು ನೀವು ನಿಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುವುದಕ್ಕೆ ನಿಮ್ಮ ವೈದ್ಯರು ನಿಮಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ.

 

ಕೆಲವು ಅತ್ಯಂತ ಸಾಮಾನ್ಯ ಅಸ್ತಮಾ ಪ್ರಚೋದಕಗಳೆಂದರೆ(ಇದೊಂದು ಇನ್ಫೋಗ್ರಾಫಿಕ್ ಪಟ್ಟಿ ಆಗಿರುತ್ತದೆ)

ಧೂಳು ಹುಳಗಳು - ಹಾಸಿಗೆಗಳ, ಪರದೆಗಳ ಮತ್ತು ಮೃದು ಆಟಿಕೆಗಳ ಮೇಲಿನ ಧೂಳಿನಲ್ಲಿ ಬೆಳೆಯುವ ಹುಳಗಳು.

ಪರಾಗ - ಹೂಬಿಡುವ ಸಸ್ಯಗಳು ಪದೇ ಪದೇ ಪರಾಗವನ್ನು ಬಿಡುಗಡೆ ಮಾಡಿ ಅದು ಕೆಲವು ಜನರಿಗೆ ಪ್ರಚೋಕವಾಗಬಹುದು.

ಸಿಗರೆಟ್ ಹೊಗೆ ಮತ್ತು ವಾಯು ಮಾಲಿನ್ಯಕಾರಕಗಳು - ಪಟಾಕಿಗಳಿಂದ ಹೊಗೆ, ನಿಷ್ಕಾಸ ಧೂಮಗಳು ಮತ್ತು ಸಿಗರೆಟ್ ಹೊಗೆಯು ಅಸ್ತಮಾ ದಾಳಿಯನ್ನು ಪ್ರಚೋದಿಸಬಹುದು.

ಸಾಕುಪ್ರಾಣಿಗಳು - ಸಾಕುಪ್ರಾಣಿಗಳ ಕೂದಲು, ಗರಿಗಳು, ಜೊಲ್ಲು ಮತ್ತು ತುಪ್ಪಳವು ಅಸ್ತಮಾಕ್ಕೆ ಪ್ರಚೋದಕವಾಗಬಹುದು

ಔದ್ಯೋಗಿಕ ಪ್ರಚೋದಕಗಳು - ಮುದ್ರಣಾಲಯಗಳು, ಪೇಂಟ್ ಕಾರ್ಖಾನೆಗಳು, ಆಭರಣ ತಯಾರಿಕೆ, ಕಲ್ಲುಗಣಿ ಇತ್ಯಾದಿಗಳಂತಹ ಕೈಗಾರಿಕೆಗಳಲ್ಲಿ ಕೆಲಸ ಮಾಡುವುದು ನಿಮ್ಮ ಅಸ್ತಮಾಕ್ಕೆ ಕಾರಣವಾಗಿರಬಹುದು.

ಶೀತ ಮತ್ತು ವೈರಸ್ಗಳು - ನಿಮ್ಮನ್ನು ಆರೋಗ್ಯಕರವಾಗಿರಿಸಿಕೊಳ್ಳುವುದು ಅಸ್ತಮಾ ದಾಳಿಗಳಿಂದ ದೂರವಿರಲು ಸಹಾಯ ಮಾಡುತ್ತದೆ.

ಔಷಧ - ಕೆಲವು ಔಷಧಗಳು ನಿಮ್ಮ ದೇಹದೊಂದಿಗೆ ಕೆಟ್ಟದಾಗಿ ಪ್ರತಿಕ್ರಿಯಿಸಬಹುದು. ಆದ್ದರಿಂದ, ನಿಮ್ಮ ಎಲ್ಲಾ ಔಷಧಗಳ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿಸಿ.

ವ್ಯಾಯಾಮ - ವ್ಯಾಯಾಮವು ನಿಮ್ಮನ್ನು ಯೋಗ್ಯವಾಗಿರಿಸಿಕೊಳ್ಳುವ ಒಂದು ಉತ್ತಮ ಮಾರ್ಗವಾಗಿದೆ. ಆದಾಗ್ಯೂ, ಕೆಲವು ಜನರಿಗೆ ದೈಹಿಕ ಚಟುವಟಿಕೆಗಳು ಕೂಡ ಅಸ್ತಮಾ ದಾಳಿಯ ಕಾರಣವಾಗಬಹುದು.

ಆಹಾರ - ಅಸ್ತಮಾ ಇರುವ ಪ್ರತಿಯೊಬ್ಬರಿಗೂ ಕಟ್ಟುನಿಟ್ಟಾದ ಆಹಾರದ ಅಗತ್ಯವಿಲ್ಲವಾದರೂ, ಕೆಲವರು ಹಾಲು, ಸೋಡಾ ಪಾನೀಯಗಳು ಮತ್ತು ಬೀಜಗಳು ಮುಂತಾದ ಕೆಲವು ಆಹಾರಗಳಿಗೆ ಅಲರ್ಜಿಯನ್ನು ಹೊಂದಿರಬಹುದು.

ಹವಾಮಾನ - ಹಠಾತ್ ತಾಪಮಾನ ಬದಲಾವಣೆಗಳು ಸಹ ಅಸ್ತಮಾಕ್ಕೆ ಪ್ರಚೋದಕವಾಗಬಹುದು

ಬೂಷ್ಟುಗಳು ಮತ್ತು ಶಿಲೀಂಧ್ರಗಳು - ಒದ್ದೆ ಗೋಡೆಗಳಿಗೆ ಒಡ್ಡಿಕೊಳ್ಳುವಿಕೆ, ಕೊಳೆಯುತ್ತಿರುವ ಎಲೆಗಳು ಮತ್ತು ಶಿಲೀಂಧ್ರಗಳು ಅಸ್ತಮಾದ ಪ್ರಚೋದಕಗಳಾಗಿ ಪರಿಚಿತವಾಗಿದೆ.

ಬಲವಾದ ಭಾವನೆಗಳು - ಒತ್ತಡವು ನಿಮ್ಮ ದೇಹವನ್ನು ಹೋರಾಡುವಂತೆ ಮಾಡುತ್ತದೆ ಮತ್ತು ಅಸ್ತಮಾದ ಪ್ರಚೋದಕವಾಗಿ ಕಾರ್ಯನಿರ್ವಹಿಸುತ್ತವೆ.

ಹಾರ್ಮೋನುಗಳು - ಮಹಿಳೆಯರಲ್ಲಿ ಹಾರ್ಮೋನುಗಳು ಅಸ್ತಮಾ ಪ್ರಚೋದಕಗಳಾಗಿರಬಹುದು ಕೆಲವರು ಪ್ರೌಢಾವಸ್ಥೆಗೆ ಸ್ವಲ್ಪ ಮುಂಚೆ, ಅವರ ಋತುಚಕ್ರದ ಮತ್ತು ಗರ್ಭಾವಸ್ಥೆಯಲ್ಲಿ ಅಸ್ತಮಾ ದಾಳಿಯನ್ನು ಅನುಭವಿಸಬಹುದು.

ಸೊಳ್ಳೆ ಸುರುಳಿಗಳು, ಕೋಣೆ ಫ್ರೆಷನರುಗಳು ಮತ್ತು ಶುಚಿಗೊಳಿಸುವ ಉತ್ಪನ್ನಗಳು - ಇವುಗಳಲ್ಲಿ ಬಳಸಲಾಗುವ ರಾಸಾಯನಿಕ ವಸ್ತುಗಳು ನಿಮ್ಮ ವಾಯುಮಾರ್ಗಗಳಿಗೆ ಉದ್ರೇಕಕಾರಿಗಳಾಗಿ ವರ್ತಿಸುತ್ತವೆ ಮತ್ತು ಅಸ್ತಮಾ ದಾಳಿಯನ್ನು ಪ್ರಚೋದಿಸುತ್ತವೆ.

For more information on the use of Inhalers, click here

Please Select Your Preferred Language