ಬ್ರಾಂಕೈಟಿಸ್

ಕುರಿತು

ಲೋಳೆ (ಶ್ಲೇಷ್ಮ) ಯೊಂದಿಗೆ ಎಡೆಬಿಡದೆ ಕಾಡಿಸುವ ಕೆಮ್ಮು ಮತ್ತು ಉಸಿರಾಟದ ತೊಂದರೆ ಬ್ರಾಂಕೈಟಿಸ್‌ನ ಸೂಚಕವಾಗಿವೆ. ಶ್ವಾಸಕೋಶದಲ್ಲಿರುವ ವಾಯುಮಾರ್ಗಗಳು, ಶ್ವಾಸನಾಳಗಳು ಎಂದು ಕರೆಯಲ್ಪಡುತ್ತವೆ, ಸೋಂಕಿತಗೊಂಡಾಗ ಅಥವಾ ಕೆರಳಿದಾಗ ಮತ್ತು ಊದಿಕೊಂಡಾಗ, ಸಮಸ್ಯೆಯು ಆರಂಭವಾಗುತ್ತದೆ. ಇದರಿಂದಾಗಿ ಗಾಳಿಯು ನಾಳಗಳ ಒಳಗೆ ಮತ್ತು ಹೊರಗೆ ಹರಿಯುವುದು ಕಷ್ಟವಾಗುತ್ತದೆ, ಹೀಗಾಗಿ ಉಸಿರಾಟದಲ್ಲಿ ತೊಂದರೆ
ಉಂಟಾಗುತ್ತದೆ. ಬ್ರಾಂಕೈಟಿಸ್ ಬಗ್ಗೆ ಚಿಂತಿಸಬೇಕಾಗಿಲ್ಲ ಮತ್ತು ಸರಿಯಾದ ರೋಗನಿದಾನದ ನಂತರ ಸಂಪೂರ್ಣವಾಗಿ
ಚಿಕಿತ್ಸಿಸಬಹುದಾಗಿದೆ. ಬ್ರಾಂಕೈಟಿಸ್‌ನ ಕೆಲವು ಸಾಮಾನ್ಯ ಕಾರಣಗಳು ಬ್ಯಾಕ್ಟೀರಿಯಾ, ವೈರಸ್, ಉದ್ರೇಕಕಾರಿಗಳು,
ಹೊಗೆ, ಮತ್ತು ರಾಸಾಯನಿಕಗಳು.
’ಸರಿಯಾದ ರೋಗನಿದಾನ ಮತ್ತು ಚಿಕಿತ್ಸೆಯು ಬ್ರಾಂಕೈಟಿಸ್‌ ಅನ್ನು ಗುಣಪಡಿಸಬಲ್ಲವು’
ಮುಖ್ಯವಾಗಿ, ಎರಡು ವಿಧಗಳ ಬ್ರಾಂಕೈಟಿಸ್‌ಗಳಿವೆ -
ತೀವ್ರವಾದ ಬ್ರಾಂಕೈಟಿಸ್- ವೈರಾಣು ಅಥವಾ ಬ್ಯಾಕ್ಟೀರಿಯಾದ- ಸೋಂಕುಗಳಿಂದ ಹೆಚ್ಚು ಸಾಮಾನ್ಯವಾಗಿ
ಉಂಟಾಗುತ್ತದೆ. ಇತರವುಗಳ ಪೈಕಿ ಕೆಲವು ಲಕ್ಷಣಗಳು, ಕೆಮ್ಮು, ಜ್ವರ, ನೋಯುತ್ತಿರುವ ಗಂಟಲು ಮತ್ತು ಉಬ್ಬಸ
ಸೇರಿವೆ. ಇದು ಸಾಮಾನ್ಯವಾಗಿ ಕೆಲವು ವಾರಗಳವರೆಗೆ ಇರುತ್ತದೆ, ಆದರೆ ಸಾಮಾನ್ಯವಾಗಿ ನಂತರ ಯಾವುದೇ ಸಮಸ್ಯೆ
ಉಂಟಾಗುವುದಿಲ್ಲ.
ದೀರ್ಘಕಾಲೀನ ಬ್ರಾಂಕೈಟಿಸ್‌ - ಇದು ತೀವ್ರವಾದ ಬ್ರಾಂಕೈಟಿಸ್‌ಗಿಂತ ಸ್ವಲ್ಪ ಹೆಚ್ಚು ಗಂಭೀರವಾದುದು. ಈ ವಿಧದ
ಬ್ರಾಂಕೈಟಿಸ್ ಸಾಮಾನ್ಯವಾಗಿ ಮರುಕಳಿಸುತ್ತದೆ ಅಥವಾ ದೀರ್ಘಕಾಲ ಉಳಿಯುತ್ತದೆ. ಇದು ಸಿಒಪಿಡಿ ಯಂತಹ ಇತರ
ಶ್ವಾಸಕೋಶ ಸಮಸ್ಯೆಗಳ ಸೂಚಕವಾಗಿದೆ. ಪ್ರಮುಖ ಲಕ್ಷಣಗಳೆಂದರೆ ತಿಂಗಳುಗಳು ಅಥವಾ ವರ್ಷಗಳ ಕಾಲ ಇದ್ದ
ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳು. ಧೂಮಪಾನವು ದೀರ್ಘಕಾಲೀನ ಬ್ರಾಂಕೈಟಿಸ್‌ಗೆ ಅತ್ಯಂತ ಸಾಮಾನ್ಯ
ಕಾರಣವಾಗಿದೆ. ನೆನಪಿಡಬೇಕಾದ ಮುಖ್ಯ ವಿಷಯವೆಂದರೆ ಬ್ರಾಂಕೈಟಿಸ್ ಅನ್ನು,ಸರಿಯಾದ ರೋಗನಿದಾನ ಮತ್ತು
ಚಿಕಿತ್ಸೆಯಿಂದ, ಗುಣಪಡಿಸಬಹುದು.

For more information on the use of Inhalers, click here

Please Select Your Preferred Language