ವ್ಹೀಜಿಂಗ್

ಉಬ್ಬಸ ಎಂದರೇನು? (ಕುರಿತು)

ಉಬ್ಬಸ ಎನ್ನುವುದು ಉಸಿರಾಟದ ಸಮಯದಲ್ಲಿ ನೀವು ಅನೈಚ್ಛಿಕವಾಗಿ ಮಾಡುವ ಸಿಳ್ಳು ಹಾಕುವಂತಹ ಶಬ್ದವನ್ನು ಉಲ್ಲೇಖಿಸುತ್ತದೆ. ಉಸಿರು ಹೊರಬಿಡುವ ಸಂದರ್ಭದಲ್ಲಿ ಈ ಶಬ್ದವು ಸಾಮಾನ್ಯವಾಗಿ ಕೇಳಿಬರುತ್ತದೆಯಾದರೂ, ಕೆಲವೊಮ್ಮೆ ನೀವು ಉಸಿರು ತೆಗೆದುಕೊಳ್ಳುತ್ತಿರುವಾಗಲೂ ಸಹ ನೀವು ಇದನ್ನು ಕೇಳಬಹುದು. ಆದಾಗ್ಯೂ ಉಬ್ಬಸವು ಸಾಮಾನ್ಯವಾಗಿ ಬ್ರಾಂಕೈಟಿಸ್, ಸಿಒಪಿಡಿ ಅಥವಾ  ಅಸ್ತಮಾ ಮುಂತಾದ ಉಸಿರಾಟದ ತೊಂದರೆಯ ಒಂದು
ಸೂಚಕವಾಗಿರಬಹುದಾಗಿದ್ದು, ಅದು ಶ್ವಾಸಕೋಶಗಳ ದೊಡ್ಡ ವಾಯುಮಾರ್ಗಗಳಲ್ಲಿನ ತಡೆಗಟ್ಟುವಿಕೆ, ಅಥವಾ
ಧ್ವನಿ ತಂತುಗಳಲ್ಲಿ ಸಮಸ್ಯೆಯ ಕಾರಣದಿಂದ ಕೂಡ ಉಂಟಾಗಬಹುದು.
ಉಬ್ಬಸವನ್ನು ಸರಿಯಾದ ರೀತಿಯ ಔಷಧಗಳಿಂದ ಸುಲಭವಾಗಿ ಚಿಕಿತ್ಸಿಸಬಹುದಾಗಿದೆ. ಚಿಂತಿಸುವುದಕ್ಕೆ ಯಾವುದೇ
ಕಾರಣವಿರುವುದಿಲ್ಲ, ಏಕೆಂದರೆ ಆಧುನಿಕ ಔಷಧವು ಬಹಳಷ್ಟು ಉಸಿರಾಟದ ಸಮಸ್ಯೆಗಳನ್ನು ಸಂಪೂರ್ಣವಾಗಿ
ನಿಯಂತ್ರಿಸುವುದನ್ನು ಮತ್ತು ಚಿಕಿತ್ಸೆ ನೀಡುವುದನ್ನು ಸಾಧ್ಯವಾಗಿಸಿದೆ.

For more information on the use of Inhalers, click here

Please Select Your Preferred Language